ಬೆಂಗಳೂರು: ಒಂಬತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ದಿನೇಶ್ ಮಿಲಿ ಅಲಿಯಾಸ್ ಅರ್ಜುನ್ ಎಂಬಾತನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಯಾದ ಆರೋಪಿ, ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದ. ಪಕ್ಕದ ಮನೆಯಲ್ಲಿ ವಾಸವಿದ್ದ ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದರು.

‘ಸಂತ್ರಸ್ತೆಯ ಪೋಷಕರು ಕಾರ್ಮಿಕರಾಗಿದ್ದು, ಬೆಳಿಗ್ಗೆ ಕೆಲಸಕ್ಕೆ ಹೋದರೆ ರಾತ್ರಿಯೇ ಮನೆಗೆ ವಾಪಸ್ ಬರುತ್ತಾರೆ. ಮೇ 3ರಂದು ಸಹ ಬೆಳಿಗ್ಗೆ ಪೋಷಕರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಬಾಲಕಿಯು ಪಕ್ಕದ ಮನೆಯ ಮಗುವಿನೊಂದಿಗೆ ಆಟವಾಡುತ್ತಿದ್ದಳು. ಆಕೆಯನ್ನು ನೋಡಿದ್ದ ಆರೋಪಿ, ತನ್ನ ಮನೆಗೆ ಕರೆಸಿಕೊಂಡಿದ್ದ. ಟೇಬಲ್ ಮೇಲಿಟ್ಟಿದ್ದ ತನ್ನ ಮೊಬೈಲ್ ತೆಗೆದುಕೊಂಡು ಕೊಠಡಿಗೆ ಬರುವಂತೆ ಹೇಳಿದ್ದ. ಆಗ, ಸಂತ್ರಸ್ತೆಯು ಮೊಬೈಲ್ ತೆಗೆದುಕೊಂಡು ಹೋಗಿ ಕೊಟ್ಟಿದ್ದಳು’

‘ಮೊಬೈಲ್‌ನಲ್ಲಿರುವ ಚಿತ್ರಗಳನ್ನು ತೋರಿಸುವುದಾಗಿ ಬಾಲಕಿಯನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದ. ನಂತರ, ಬಾಲಕಿಯ ಬಟ್ಟೆಗಳನ್ನು ಬಿಚ್ಚಿ ತಬ್ಬಿಕೊಂಡಿದ್ದ. ಗಾಬರಿಗೊಂಡ ಬಾಲಕಿ, ಮೊಬೈಲ್ ಕಸಿದುಕೊಂಡು ಎಸೆದಿದ್ದಳು. ಅದನ್ನು ತೆಗೆದುಕೊಳ್ಳಲು ಆರೋಪಿ ಹೋಗುತ್ತಿದ್ದಂತೆ, ಅಲ್ಲಿಂದ ತಪ್ಪಿಸಿಕೊಂಡು ಬಾಲಕಿ ತನ್ನ ಮನೆಗೆ ಹೋಗಿದ್ದಳು’ ಎಂದು ಪೊಲೀಸರು ತಿಳಿಸಿದರು.

‘ಪೋಷಕರು ಸಂಜೆ ಮನೆಗೆ ಬಂದಾಗ ಬಾಲಕಿ ವಿಷಯ ತಿಳಿಸಿದ್ದಳು. ನಂತರ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.