ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ ಅಂಗವಾಗಿ ಅಂಚೆ ಇಲಾಖೆಯಿಂದ ಗುರುವಂದನಾ ಸೇವೆ

Last Updated 25 ಆಗಸ್ಟ್ 2022, 22:21 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಅಂಚೆ ಇಲಾಖೆಯು ‘ಗುರುವಂದನಾ’ ಹೆಸರಿನಲ್ಲಿ ವಿಶೇಷ ಸೇವೆಯನ್ನು ಆರಂಭಿಸಿದೆ. ಗ್ರಾಹಕರು ಈ ಸೇವೆ ಮೂಲಕ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರಿಗೆ ವಿಶೇಷ ಕೊಡುಗೆಗಳನ್ನು ಕಳುಹಿಸಬಹುದುಅಥವಾ ಶುಭಾಶಯ ಕೋರಬಹುದಾಗಿದೆ.

ನಾಗರಿಕರು ತಮ್ಮ ಶಿಕ್ಷಕರಿಗೆ ಆನ್‌ಲೈನ್‌ ಮೂಲಕ ಸಂದೇಶಗಳನ್ನು ಕಳುಹಿಸಬಹುದು ಅಥವಾ ಪೆನ್‌, ಪೆನ್ಸಿಲ್‌ ಮತ್ತು ಬುಕ್‌ಮಾರ್ಕ್‌ಗಳನ್ನು ವಿಶೇಷ ಲಕೋಟೆಗಳ ಮೂಲಕ ಸ್ಪೀಡ್‌ಪೋಸ್ಟ್‌ ಮೂಲಕ ಕಳುಹಿಸಬಹುದು. ಇದಕ್ಕೆ ₹140 ನಿಗದಿಪಡಿಸಲಾಗಿದ್ದು, ಆನ್‌ಲೈನ್‌ ಮೂಲಕ ಪಾವತಿಸಬೇಕು.

ಗುರುವಂದನಾ ಸೇವೆಯನ್ನು https://www.karnatakapost.gov.in/Guruvandana ವೆಬ್‌ಸೈಟ್‌ ಮೂಲಕ ಪಡೆಯಬಹುದು. ಜಗತ್ತಿನಾದ್ಯಂತ ಇರುವ ಗ್ರಾಹಕರು ಭಾರತದ ಯಾವುದೇ ಭಾಗದಲ್ಲಿರುವ ಶಿಕ್ಷಕರಿಗೆ ಕೊಡುಗೆಗಳನ್ನು ಕಳುಹಿಸಲು ಈ ಸೇವೆಯನ್ನು ಪಡೆಯಬಹುದು. ಸೆ.1ರವರೆಗೆ ಅಥವಾ ಉತ್ಪನ್ನಗಳು ಮುಗಿಯುವವರೆಗೆ ಮಾತ್ರ ಬಳಸಿಕೊಳ್ಳಬಹುದು ಎಂದು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT