ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶ ವಿನ್ಯಾಸ ವಸ್ತು ಪ್ರದರ್ಶನಕ್ಕೆ ಚಾಲನೆ

Last Updated 7 ಆಗಸ್ಟ್ 2022, 7:45 IST
ಅಕ್ಷರ ಗಾತ್ರ

ಬೆಂಗಳೂರು: ಹೇರ್ ಕೇರ್, ಸಲೂನ್ ಮತ್ತು ಸ್ಪಾಎ ಕ್ಸ್‌ಪೋ ನಗರದಲ್ಲಿ ಆರಂಭವಾಗಿದ್ದು, ನಾಲ್ಕು ದಿನಗಳ ವಸ್ತು ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆತಿದೆ.

ನಾಗವಾರದ ಹೊರ ವರ್ತುಲ ರಸ್ತೆಯಲ್ಲಿನ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಆಯೋಜಿಸಿರುವ ವಸ್ತು ಪ್ರದರ್ಶನಕ್ಕೆ ವಸತಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

‘ಕೇಶ ವಿನ್ಯಾಸ ಮತ್ತು ಸೌಂದರ್ಯವರ್ಧಕ ಕ್ಷೇತ್ರದಲ್ಲಿ ವರ್ಷಕ್ಕೆ ₹30 ಸಾವಿರ ಕೋಟಿಯಷ್ಟು ವಹಿವಾಟು ನಡೆಯುತ್ತಿದೆ. ಇದರಲ್ಲಿ ಶೇ 35ರಷ್ಟು ಮಾತ್ರ ಸವಿತಾ ಸಮಾಜದವರಿದ್ದು, ಎಲ್ಲಾ ಜಾತಿ ಮತ್ತು ಧರ್ಮದವರೂ ಈ ಕ್ಷೇತ್ರದಲ್ಲಿ ಈಗ ತೊಡಗಿಕೊಂಡಿದ್ದಾರೆ. ಸವಿತಾ ಸಮಾಜದವರು ಇನ್ನಷ್ಟು ಪರಿಣತಿ ಸಾಧಿಸಲು ಈ ವಸ್ತು ಪ್ರದರ್ಶನ ಅನುಕೂಲ ಆಗಲಿದೆ’ ಎಂದು ನಿಗಮದ ಅಧ್ಯಕ್ಷ ಎಸ್. ನರೇಶ್‌ಕುಮಾರ್ ತಿಳಿಸಿದರು.

‘ಅಂತರರಾಷ್ಟ್ರೀಯ ಮಟ್ಟದ ಕಲಾವಿದರು, ಕೇಶ ವಿನ್ಯಾಸಕರು ಸ್ಥಳದಲ್ಲೇ ಮೇಕಪ್ ಮಾಡಲಿದ್ದಾರೆ. ಇದು ಈ ಸಮುದಾಯದ ವೃತ್ತಿನಿರತರಿಗೆ ತರಬೇತಿಯಂತೆ ಆಗಲಿದೆ. ಅಲ್ಲದೇ ಕಿಳರಿಮೆ ತೊರೆದು ಆತ್ಮವಿಶ್ವಾಸದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದರು.

ಕಾಸ್ಮಿಕ್ ಪಾರ್ಕ್‌ಗೆ ಪ್ರಸ್ತಾವನೆ

‘ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆಗೆ ರಾಜ್ಯದಲ್ಲಿ ‘ಕಾಸ್ಮಿಕ್ ಪಾರ್ಕ್‌’ ತೆರೆಯುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ’ ಎಂದು ಎಸ್.ನರೇಶ್‌ಕುಮಾರ್ ತಿಳಿಸಿದರು.

ಅಗತ್ಯ ಇರುವ 150 ಎಕರೆ ಜಾಗ ಗುರುತಿಸುವ ಸಂಬಂಧ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.

‘ಪೌಡರ್, ಕ್ರೀಮ್, ಬ್ಲೇಡ್ ಸೇರಿ ಎಲ್ಲಾ ವಸ್ತುಗಳು ಸ್ಥಳೀಯವಾಗಿಯೇ ಉತ್ಪಾದನೆ ಮಾಡಿಕೊಳ್ಳಬಹುದು. ಸದ್ಯ ಉತ್ತರ ಭಾರತ ಮತ್ತು ಹೊರ ದೇಶಗಳನ್ನು ಅವಲಂಬಿಸಿದ್ದೇವೆ’ ಎಂದು ಹೇಳಿದರು.

ಕೇಶ ವಿನ್ಯಾಸದ ಬಗ್ಗೆ ತರಬೇತಿ ನೀಡುವ ಪಠ್ಯಕ್ರಮವೇ ಇಲ್ಲ. ಆಸ್ಟ್ರೇಲಿಯಾ, ಟರ್ಕಿ ಮತ್ತು ಇಂಗ್ಲೆಂಡ್‌ನಲ್ಲಿ ಪಠ್ಯಕ್ರಮ ಆಧರಿತ ತರಬೇತಿ ನೀಡಲಾಗುತ್ತಿದೆ. ವಿಶ್ವವಿದ್ಯಾಲಯದಲ್ಲಿ ಈ ಕೋರ್ಸ್‌ಗಳನ್ನೂ ತೆರೆಯುವ ಅಗತ್ಯವಿದೆ. ಈ ಸಂಬಂಧವೂ ಸರ್ಕಾರದ ಜತೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT