ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗಿನಲ್ಲಿ ‘ಧ್ರುವ್‌’ ಸಾಮರ್ಥ್ಯ ಪರೀಕ್ಷೆ

Last Updated 29 ಏಪ್ರಿಲ್ 2021, 21:37 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಎಲ್‌ ಅಭಿವೃದ್ಧಿಪಡಿಸಿದ ‘ಧ್ರುವ್‌ ಎಂಕೆ 3’ ಸುಧಾರಿತ ಲಘು ಹೆಲಿಕಾಪ್ಟರ್‌ ಹಡಗಿನ ಮೇಲೆ ಇಳಿಯುವ, ಬ್ಲೇಡ್‌ಗಳನ್ನು ಮಡಚುವ ಮತ್ತು ಹ್ಯಾಂಗರ್‌ನೊಳಗೆ ನಿಲ್ಲುವ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ.

ಇತ್ತೀಚೆಗೆ ಚೆನ್ನೈನ ಕಡಲ ತೀರದಲ್ಲಿ ಭಾರತೀಯ ಕೋಸ್ಟ್‌ ಗಾರ್ಡ್‌ ಸಹಯೋಗದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ಹಡಗಿನ ಮೇಲೆ ಇಳಿದ ಬಳಿಕ ಎಲ್ಲ ಚಟುವಟಿಕೆಗಳ ಜತೆಗೆ ಇಂಧನ ತುಂಬಿಸುವ ಪ್ರಯೋಗವೂ ನಡೆಯಿತು ಎಂದು ಎಚ್‌ಎಎಲ್‌ ಪ್ರಕಟಣೆ ತಿಳಿಸಿದೆ.

ಹೆಲಿಕಾಪ್ಟರ್‌ ಅತ್ಯಾಧುನಿಕ ‘ಶಕ್ತಿ’ ಎಂಜಿನ್‌ ಮತ್ತು ಗಾಜಿನ ಕಾಕ್‌ಪಿಟ್‌ ಅನ್ನು ಹೊಂದಿದೆ. ಇತ್ತೀಚೆಗಷ್ಟೇ ಭಾರತೀಯ ಕೋಸ್ಟ್‌ ಗಾರ್ಡ್‌ಗೆ ಎಚ್‌ಎಎಲ್‌ ಧ್ರುವ್‌ ಎಂಕೆ 3 ಎಂಆರ್‌ ಅನ್ನು ಪೂರೈಕೆ ಮಾಡಿತ್ತು. 16 ಎಎಲ್‌ಎಚ್‌ ಪೂರೈಕೆಯ ಒಪ್ಪಂದ ಆಗಿತ್ತು.

ಈ ಪ್ರಾಯೋಗಿಕ ಪ್ರಾತ್ಯಕ್ಷಿಕೆಯ ಮೂಲಕ ಹಡಗಿನಲ್ಲಿ ಎಎಲ್‌ಎಚ್‌ ಧ್ರುವ್‌ ಹೆಲಿಕಾಪ್ಟರ್‌ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಾಧ್ಯವಾಗಿದೆ. ನಿಗಾ ಇಡುವುದು, ಹುಡುಕಾಟ ಮತ್ತು ರಕ್ಷಣೆ ಕಾರ್ಯಕ್ಕೆ ಈ ಹೆಲಿಕಾಪ್ಟರ್‌ ಬಳಸಬಹುದಾಗಿದೆ ಎಂದು ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT