ಬೆಂಗಳೂರು: ಎಚ್ಎಎಲ್ ತಯಾರಿಸಿದ ‘ಏರ್ ಡೇಟಾ ಕಂಪ್ಯೂಟರ್ಗೆ (ಎಡಿಸಿ) ಭಾರತೀಯ ತಾಂತ್ರಿಕ ಗುಣಮಟ್ಟದ ಮಾನ್ಯತೆಯ ಪ್ರಮಾಣಪತ್ರ (ಐಟಿಎಸ್ಒಎ) ದೊರೆತಿದೆ.

ಭಾರತೀಯ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ಈ ಪ್ರಮಾಣಪತ್ರ ನೀಡಿದೆ. ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ಗೆ ಈ ಪ್ರಮಾಣಪತ್ರ ಲಭಿಸಿದೆ.

ಐಟಿಎಸ್ಒಎನಿಂದ ಮಾನ್ಯತೆ ಪಡೆದ ಭಾರತದ ಮೊದಲ ಉಪಕರಣ ‘ಎಡಿಸಿ’ಯಾಗಿದೆ. ಈ ಉಪಕರಣವನ್ನು ಎಎಲ್ಎಚ್, ಎಲ್ಯುಎಚ್, ಸಾರಸ್ ಹೆಲಿಕಾಪ್ಟರ್ಗಳಲ್ಲಿ ಅಳವಡಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಎತ್ತರ ಪ್ರದೇಶದಲ್ಲಿ ಗಾಳಿಯ ಒತ್ತಡ, ಗಾಳಿಯ ವೇಗ, ತಾಪಮಾನ ಮುಂತಾದವುಗಳನ್ನು ಅಳೆಯಲು ಈ ಉಪಕರಣವನ್ನು ಬಳಸಲಾಗುತ್ತದೆ.

ಹೈದರಾಬಾದ್ನಲ್ಲಿರುವ ಎಚ್ಎಎಲ್ನ ವಿದ್ಯುನ್ಮಾನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಎಸ್ಎಲ್ಆರ್ಡಿಸಿ) ಎಡಿಸಿಯನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.