ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳ ಮಾತಿನ ಇರಿತವೂ ಹಿಂಸೆ: ಹಂಪನಾ

Last Updated 2 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ಅಹಿಂಸಾ ಪರಮೋ ಧರ್ಮ ಎನ್ನುವ ಧರ್ಮವಾಕ್ಯ ಮರೆತಿರುವ ರಾಜಕಾರಣಿಗಳು, ನಿತ್ಯವೂ ಪರಸ್ಪರ ಮಾತುಗಳಲ್ಲಿ ಇರಿಯುವುದೂ ಒಂದು ರೀತಿಯ ಹಿಂಸೆ ಎಂದು ಸಾಹಿತಿ ಹಂಪ ನಾಗರಾಜಯ್ಯ
ಪ್ರತಿಪಾದಿಸಿದರು.

ಶೇಷಾದ್ರಿಪುರಂ ವಾಣಿಜ್ಯ ಮತ್ತು ವ್ಯವಸ್ಥಾಪನಾ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಜೈನ ಧರ್ಮ; ಅಹಿಂಸೆಯ ಪರಿಕಲ್ಪನೆಗಳು’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಎಲ್ಲ ಧರ್ಮಗಳೂ ಅಹಿಂಸೆಗೆ ಮಹತ್ವ ನೀಡಿವೆ. ನೀನು ಬದುಕು, ಇತರರಿಗೂ ಬದುಕಲು ಬಿಡು ಎನ್ನುವುದು ಬದುಕಿನ ಧ್ಯೇಯವಾಗಬೇಕಿದೆ. ಅಹಿಂಸೆಗೆ ಹಲವು ಆಯಾಮಗಳಿವೆ. ಮಹಾವೀರ, ಬುದ್ಧ, ಗಾಂಧೀಜಿ ಅವರು ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ ಎಂದು ಶ್ಲಾಘಿಸಿದರು.

ಯುದ್ಧದ ಪರಿಣಾಮ ಇಂದಿಗೂ ಸಾವಿರಾರು ಜನರು ಜೀವ ಕಳೆದುಕೊಳ್ಳುತ್ತಿರುವ ಈ ಸಮಯದಲ್ಲಿ ಆಯುಧ ಬಳಸದೇ ಯುದ್ಧ ಮಾಡಬಹುದು ಎನ್ನುವುದನ್ನು ಜಗತ್ತಿಗೆ ತೋರಿಕೊಟ್ಟವರು ಭರತ ಮತ್ತು ಬಾಹುಬಲಿ ಸಹೋದರರು. ಹಣ, ಅಧಿಕಾರ ವಿವೇಕ ಮರೆಸುತ್ತದೆ ಎನ್ನುವ ನೀತಿಪಾಠ ಹೇಳಿದ್ದಾರೆ. ಆದರೂ, ಜಗತ್ತು ಪಾಠ ಕಲಿತಿಲ್ಲ ಎಂದು ವಿಷಾದಿಸಿದರು.

ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ತಾರಿಹಳ್ಳಿ ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ.ಚಿ.ರಮೇಶ ಅಧ್ಯಕ್ಷತೆ ವಹಿಸಿದ್ದರು. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಸಮಿಉಲ್ಲಾಖಾನ್, ಓ.ಓಬಯ್ಯ, ಪ್ರಾಂಶುಪಾಲರಾದ ವಿದ್ಯಾ ಶಿವಣ್ಣನವರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT