ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪುರ ಬಲಿಜ ಸಂಘದಿಂದ ಆರೋಗ್ಯ ಶಿಬಿರ

Published 20 ಆಗಸ್ಟ್ 2023, 16:29 IST
Last Updated 20 ಆಗಸ್ಟ್ 2023, 16:29 IST
ಅಕ್ಷರ ಗಾತ್ರ

ಕೆ.ಆರ್‌.ಪುರ: ಕೆಟಿವಿ ಬಡಾವಣೆಯಲ್ಲಿ ಕೆ.ಆರ್‌.ಪುರ ಬಲಿಜ ವೆಲ್ಫೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ರಕ್ತದ ಒತ್ತಡ, ಇಸಿಜಿ, ಸಾಮಾನ್ಯ ಪರೀಕ್ಷೆ, ಇಎನ್‌ಟಿ, ಕಣ್ಣಿನ ಪರೀಕ್ಷೆ, ಮಧುಮೇಹ, ರಕ್ತದ ಹೆಪಟೈಟಿಸ್ ‘ಬಿ’ ವೈರಸ್ ಪರೀಕ್ಷೆ ನಡೆಸಲಾಯಿತು. ಕೆ.ಆರ್.ಪುರ ಸುತ್ತಮುತ್ತಲಿನ ಭಾಗಗಳಿಂದ ಆಗಮಿಸಿದ 200ಕ್ಕೂ ಜನರು ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಂಡರು.

ಟ್ರಸ್ಟ್ ಸಂಸ್ಥಾಪಕ ಎನ್. ಧನಂಜಯ್ ಮಾತನಾಡಿ, ಸರ್ವರ ಆರೋಗ್ಯ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದ ಕೆ.ಎನ್.ಮೋಹನ್, ಪರೋಪಕಾರಿ ಶ್ರೀನಿವಾಸ್, ಜಿ.ಶ್ರೀರಾಮ್, ಶಿವಪ್ಪ, ಸರಸ್ವತಮ್ಮ, ಕೆ.ಆರ್.ಹೇಮಂತ್, ಕೆ.ಎನ್.ಗಿರೀಶ್, ಮಹೇಶ್‌ಬಾಬು, ಆಂಜನೇಯಲು, ಕೆ.ಗಣೇಶ್, ಎಸ್.ಗೋಪಿನಾಥ್, ವಿ.ಶ್ರೀನಿವಾಸ್, ಡೀಸಲ್ ಮಂಜು,‌ ವೇಣು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT