ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಕ್ಷೀಣಗೊಂಡಿದ್ದ ಹೃದಯದ ಪಂಪಿಂಗ್ ಕಾರ್ಯ
Last Updated 24 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಹೃದಯ ವೈಫಲ್ಯಗೊಂಡಿದ್ದ ರೋಗಿಗೆ ಹೃದಯ ಕಸಿ ಮಾಡುವಲ್ಲಿ ನಗರದ ವಿಕ್ರಂ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

‘ದೇಶದಲ್ಲಿ ಇದೇ ಮೊದಲ ಬಾರಿಗೆ ರೋಗಿಯೊಬ್ಬರಿಗೆ ‘ಬಿಐ–ವಿಎಡಿ’ ಯಂತ್ರವನ್ನು ಸುದೀರ್ಘ ಅವಧಿಗೆ ಅಳವಡಿಸಿ ಹೃದಯ ಕಸಿ ಮಾಡಿದ ಹೆಗ್ಗಳಿಕೆ ವಿಕ್ರಂ ಆಸ್ಪತ್ರೆಯದು’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ. ರಂಗನಾಥ್‌ ನಾಯಕ್‌ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘42 ವರ್ಷದ ಮಹಿಳೆ ಗಂಭೀರ ಸ್ವರೂಪದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೃದಯ ದುರ್ಬಲವಾಗಿತ್ತು. ಹೃದಯ ಕಸಿ ಮಾಡದಿದ್ದರೆ ಅವರ ಪ್ರಾಣಕ್ಕೇ ಅಪಾಯವಿತ್ತು’ ಎಂದು ಹೇಳಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸೋಮೇಶ್ ಮಿತ್ತಲ್, ‘ಹೃದಯ ವೈಫಲ್ಯಕ್ಕೆ ಸೂಕ್ತ ಪರಿಹಾರ ಒದಗಿಸುವ ಚಿಕಿತ್ಸೆ ನೀಡಲೆಂದೇ ಪರಿಣತರ ವಿಶೇಷ ಘಟಕ(ಹಾರ್ಟ್‌ ಫೇಲ್ಯೂರ್‌ ಕ್ಲಿನಿಕ್‌ @ವಿಕ್ರಂ) ಆರಂಭಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT