ದೇಶ–ವಿದೇಶಗಳ ಕಲಾವಿದರ ಕಲಾಕೃತಿಗಳ ಪ್ರದರ್ಶನ
ದುಬೈನ ಹಲವು ಕಲಾವಿದರು ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಕೇರಳ, ತಮಿಳುನಾಡು, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಪುದುಚೇರಿ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ನೂರಾರು ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಸಂಸ್ಕೃತಿ, ಹೆಣ್ಣಿನ ಭಾವ-ಭಂಗಿ, ಆಲದ ಮರದಡಿ ಕುಳಿತ ಜ್ಞಾನಿಗಳು, ಗ್ರಾಮೀಣ ಬದುಕು, ನಿಸರ್ಗ-
ಕಡಲತೀರದ ಸೌಂದರ್ಯ, ಪುರಾಣದ ಬಹುತೇಕ ಪಾತ್ರಗಳ ಕಲಾಕೃತಿಗಳು ಪ್ರದರ್ಶನದಲ್ಲಿವೆ. ₹5 ಸಾವಿರದಿಂದ ₹5 ಲಕ್ಷದವರೆಗೆ ಕಲಾಕೃತಿಗಳ ದರ ಇದೆ.