ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರದಲ್ಲಿ ವೈದ್ಯಕೀಯ ಪರೀಕ್ಷೆಗಳ ಹೈಟೆಕ್ ಲ್ಯಾಬ್

ಪಾಲಿಕೆ-ಮಣಿಪಾಲ್ ಆಸ್ಪತ್ರೆ ಒಪ್ಪಂದ
Last Updated 7 ಅಕ್ಟೋಬರ್ 2021, 17:42 IST
ಅಕ್ಷರ ಗಾತ್ರ

ಬೆಂಗಳೂರು: ಬಡವರಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಮಲ್ಲೇಶ್ವರದಲ್ಲಿ ಹೈಟೆಕ್ ಡಯಾಗ್ನಾಸ್ಟಿಕ್ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಪಾಲಿಕೆ ಮತ್ತು ಮಣಿಪಾಲ್ ಹೆಲ್ತ್‌ ಒಪ್ಪಂದ ಮಾಡಿಕೊಂಡಿವೆ. ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಯಿತು.

ಬಳಿಕ ಮಾತನಾಡಿದ ಸಚಿವರು, ‘ಮಲ್ಲೇಶ್ವರದ ಬೆಂಗಳೂರು ಒನ್ ಕಟ್ಟಡದ ಮೊದಲ ಮಹಡಿಯಲ್ಲಿ 45 ದಿನಗಳಲ್ಲಿ ಸ್ಥಾಪನೆಯಾಗಲಿರುವ ಈ ಲ್ಯಾಬ್, 140 ವಿಧದ ವೈದ್ಯಕೀಯ ಪರೀಕ್ಷೆಗಳ ಸೌಲಭ್ಯ ಹೊಂದಿರಲಿದೆ. ದರವು ಶೇ 30ರಷ್ಟು ಕಡಿಮೆ ಇರಲಿದೆ’ ಎಂದರು.

‘ಬಿಪಿಎಲ್ ಕಾರ್ಡ್‌ ಇರುವವರಿಗೆ ಶೇ 50ರಷ್ಟು ರಿಯಾಯಿತಿ ಹಾಗೂ ಎಪಿಎಲ್ ಕಾರ್ಡ್‌ ಹೊಂದಿರುವವರಿಗೆ ಶೇ 40ರಷ್ಟು ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಯ ಅಧಿಕೃತ ಸಲಹೆ ಪಡೆದು ಬರುವವರಿಗೂ ಈ ರಿಯಾಯಿತಿ ಅನ್ವಯ’ ಎಂದು ವಿವರಿಸಿದರು.

‘ಈ ಲ್ಯಾಬ್‌ಗೆ ಕಟ್ಟಡದ ಜಾಗವನ್ನು ಪಾಲಿಕೆ ಒದಗಿಸಲಿದೆ. ಉಳಿದ ವ್ಯವಸ್ಥೆಗಳನ್ನು ಮಣಿಪಾಲ್ ಸಂಸ್ಥೆ ಮಾಡಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ನಗರದ ಬೇರೆ ಕಡೆಗಳಲ್ಲೂ ಇಂತಹ ಹೈಟೆಕ್ ಲ್ಯಾಬ್ ಸ್ಥಾಪಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT