ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಯ ಜೀವನಾಂಶ ₹40 ಲಕ್ಷಕ್ಕೆ ಹೆಚ್ಚಿಸಿದ ಕೋರ್ಟ್

ಬೆಂಗಳೂರು: ವಿಚ್ಛೇದನ ಪ್ರಕ ರಣವೊಂದರಲ್ಲಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿದ್ದ ₹ 25 ಲಕ್ಷ ಮೊತ್ತದ ಶಾಶ್ವತ ಜೀವನಾಂಶವನ್ನು ಹೈಕೋರ್ಟ್ ₹ 40 ಲಕ್ಷಕ್ಕೆ ಹೆಚ್ಚಿಸಿದೆ.
‘ಕೌಟುಂಬಿಕ ನ್ಯಾಯಾಲಯ ಆದೇಶಿಸಿರುವ ಜೀವನಾಂಶದ ಮೊತ್ತ ಕಡಿಮೆ ಮಾಡಬೇಕು’ ಎಂದು ಪತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.
ವಿಚ್ಛೇದನ ಪಡೆದಿರುವ ವಿದ್ಯಾವಂತ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು, ಮೊದಲ ಮಗ ಮುಂಬೈನ ಐಐಟಿಯಲ್ಲಿ ಓದುತ್ತಿ ದ್ದಾರೆ. ತಾಯಿಯ ವಶದಲ್ಲಿರುವ ಎರಡನೇ ಮಗ 9ನೇ ತರಗತಿಯಲ್ಲಿ ಓದುತ್ತಿದ್ದು, ಹಿರಿಯ ಮಗನಿಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ತಂದೆಯೇ ವಹಿಸಿಕೊಂಡಿದ್ದಾರೆ. ‘ಎರಡನೇ ಮಗನ ಶಿಕ್ಷಣಕ್ಕೂ ಮೊದಲ ಮಗನಿಗೆ ತಗಲುವಷ್ಟೇ ಮೊತ್ತ ಬೇಕಾಗಬಹುದು’ ಎಂಬ ಪತ್ನಿಯ ಬೇಡಿಕೆಯನ್ನು ಪರಿಗಣಿಸಿದ ನ್ಯಾಯಪೀಠ ಜೀವನಾಂಶ ಹೆಚ್ಚಿಸಿ ಆದೇಶಿಸಿದೆ. ‘ಪತಿ ಮೊದಲ ಮಗ ನನ್ನು ನೋಡಿಕೊಳ್ಳುತ್ತಿದ್ದರೆ, 2ನೇ ಮಗನ ಶಿಕ್ಷಣದ ವೆಚ್ಚವನ್ನೂ ಭರಿಸ ಬೇಕು’ ಎಂದು ಹೇಳಿದೆ.
ಪ್ರಕರಣವೇನು?: ಮಂಗಳೂರಿನ ದಂಪತಿ 2003ರಲ್ಲಿ ಮದುವೆ ಯಾಗಿದ್ದರು. 6 ವರ್ಷಗಳ ನಂತರ ಇಬ್ಬರ ಮಧ್ಯೆ ಮನಸ್ತಾಪ ಉಂಟಾ ಗಿತ್ತು. 2009ರಲ್ಲಿ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನ ಮನೆಯನ್ನು ತೊರೆದಿದ್ದರು. ಆಕೆಯನ್ನು ಮನೆಗೆ ಕರೆತರುವ ಪ್ರಯತ್ನ ವಿಫಲವಾದ ನಂತರ 2011ರಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
‘ಪತಿ ಮತ್ತು ಕುಟುಂಬದ
ಸದಸ್ಯರ ಕಿರುಕುಳದಿಂದ ಗಂಡನ ಮನೆ ತೊರೆಯಬೇಕಾಯಿತು’ ಎಂಬ ಪತ್ನಿಯ ಆರೋಪವನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ 2015 ರಲ್ಲಿ ವಿಚ್ಛೇದನದ ಡಿಕ್ರಿ ನೀಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.