ಬೆಂಗಳೂರು: ಮಹಿಳೆಯನ್ನು ಹಿಂಸಾಚಾರದಿಂದ ರಕ್ಷಿಸುವುದು ಕೌಟುಂಬಿಕ ದೌರ್ಜನ್ಯ(ಡಿ.ವಿ) ಕಾಯ್ದೆಯ ಮುಖ್ಯ ಉದ್ದೇಶವೇ ಹೊರತು ಅಪರಾಧ ಅಥವಾ ಸಿವಿಲ್ ವಿಚಾರಣೆ ನಡೆಸುವುದಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಚಾರಣಾ ನ್ಯಾಯಾಲಯದ ಮುಂದೆ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ವಿಳಂಬದ ಕಾರಣಕ್ಕೆ ವಜಾ ಮಾಡುವಂತೆ ಕೋರಿ ಪತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ಪೀಠ, ‘ಹಿಂಸೆಯಿಂದ ಮಹಿಳೆಯನ್ನು ರಕ್ಞಿಸುವುದಷ್ಟೇ ಈ ಕಾಯ್ದೆಯೆ ಉದ್ದೇಶ’ ಎಂದರು.

‘ಪರಿಹಾರ ಕೋರಿ ಮಹಿಳೆ ಅರ್ಜಿ ಸಲ್ಲಿಸುವುದೇ ಅಪರಾಧ ಅಲ್ಲ. ಇದಕ್ಕೆ ಸಿಆರ್‌ಪಿಸಿ ಸೆಕ್ಷನ್ 468ರ ಅಡಿಯಲ್ಲಿ ಸಮಯದ ಮಿತಿ ಅನ್ವಯವಾಗುವುದಿಲ್ಲ. ಕುಟುಂಬದಲ್ಲಿ ಸಂಭವಿಸುವ ಯಾವುದೇ ಹಿಂಸಾಚಾರದಿಂದ ಮಹಿಳೆಯನ್ನು ರಕ್ಷಿಸುವುದು ಈ ಕಾಯ್ದೆಯ ಉದ್ದೇಶ’ ಎಂದು ಪೀಠ ಹೇಳಿತು.

‘ಪತ್ನಿ ಪರಿಹಾರ ಪಡೆಯಲು ಅರ್ಹವಾಗಿದ್ದಾರೆ’ ಎಂದು ತಿಳಿಸಿದ ಪೀಠ, ₹4.32 ಲಕ್ಷ ಬಿಡುಗಡೆ ಮಾಡುವಂತೆ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.