ಗುರುವಾರ , ಜನವರಿ 27, 2022
20 °C

ಹಿಟಾಚಿ ಹರಿದು ಮಗು ಸಾವು 

ಪ್ರಜಾವಾಣಿ ವಾರ್ತೆ  Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಟಾಚಿ ಯಂತ್ರ ಹರಿದು ಸಿಮಿಯಾನ್‌ ಹೆಸರಿನ ಮೂರು ವರ್ಷದ ಗಂಡು ಮಗು ಮೃತಪಟ್ಟಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಠಾಣೆ ಪೊಲೀಸರು ಚಾಲಕ ಶಂಕರ್‌ ನಾಯಕ್‌ ಎಂಬಾತನನ್ನು ಬಂಧಿಸಿದ್ದಾರೆ.

‘ಕಟ್ಟಡ ಕಾರ್ಮಿಕರಾಗಿದ್ದ ಡೇವಿಡ್‌ ಜಾನ್‌ ಎಂಬುವರು ಪತ್ನಿ ನೇತ್ರಾವತಿ ಹಾಗೂ ಮಗನೊಂದಿಗೆ ಶ್ರೀರಾಮಪುರದಲ್ಲಿ ನೆಲೆಸಿದ್ದರು. ಡೇವಿಡ್‌ ಅವರು ಮುಂಜಾನೆ 5.30ರ ಸುಮಾರಿಗೆ ಧನ್ವಂತರಿ ರಸ್ತೆಯ ಸಂಗಮ್‌ ಎಂಟರ್‌ಪ್ರೈಸಸ್‌ ಬಳಿಯ ನಿರ್ಮಾಣ ಹಂತದ ಕಟ್ಟಡದ ಬಳಿ ಹೋಗಿದ್ದರು. ಉತ್ತರಾಖಂಡದ ಶಂಕರ್‌, ಹಿಟಾಚಿಯನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಜಲ್ಲಿ ಕಲ್ಲಿನ ರಾಶಿ ಬಳಿ ಮಗು ಇರುವುದನ್ನು ಗಮನಿಸಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಚಾಲಕನ ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು