ಸೋಮವಾರ, ಆಗಸ್ಟ್ 2, 2021
22 °C

ವಿಶ್ವನಾಥ್‌ ನಾಮನಿರ್ದೇಶನಕ್ಕೆ ಎಚ್‌.ಎಂ.ರೇವಣ್ಣ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಶೆಫರ್ಡ್ಸ್‌ ಇಂಡಿಯಾ ಇಂಟರ್‌ ನ್ಯಾಷನಲ್‌ನ  ರಾಷ್ಟ್ರೀಯ ಸಂಚಾಲಕ ಎಚ್‌.ಎಂ. ರೇವಣ್ಣ ಒತ್ತಾಯಿಸಿದ್ದಾರೆ.

ಸಂಘಟನೆಯ ಪ್ರಧಾನ ಕಾರ್ಯ ದರ್ಶಿ ಎಂ.ನಾಗರಾಜ್ ಜತೆಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ರೇವಣ್ಣ ಅವರು ಈ ಸಂಬಂಧ ಮನವಿ ಸಲ್ಲಿಸಿದರು.

‘ವಿಶ್ವನಾಥ್‌ ಅವರು ಹಿಂದುಳಿದ ವರ್ಗಗಳ ಸಂಘಟನೆ, ಏಕತೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಂತರರಾಷ್ಟ್ರೀಯ ಶೇಫರ್ಡ್ಸ್‌ ಫೆಡರೇಷನ್‌ನ ಸ್ಥಾಪನೆಗೆ ಮತ್ತು ಕುರುಬರ ಸಂಘಟನೆಗಾಗಿ ಹಗಲಿರುಳೂ ಶ್ರಮಿಸಿದ್ದಾರೆ. ಶಿಕ್ಷಣ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ’ ಎಂದು ರೇವಣ್ಣ ತಿಳಿಸಿದರು.

‘ಸಾಹಿತಿಯಾಗಿ ಮತ್ತು ವಾಗ್ಮಿಯಾಗಿ ಅವರು ಜನ ಮನ್ನಣೆಗೆ ಗಳಿಸಿದ್ದಾರೆ. ಹಳ್ಳಿ ಹಕ್ಕಿ ಹಾಡು, ಮತ ಸಂತೆ, ಆಪತ್‌ ಸ್ಥಿತಿಯ ಆಲಾಪಗಳು ಸೇರಿ ಹಲವು ಕೃತಿಗಳನ್ನೂ ರಚಿಸಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು