ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ಹಬ್ಬದ ಸಮಯದಲ್ಲಿ ವಿಶೇಷ ರೈಲುಗಳ ಸಂಚಾರ: ನೈರುತ್ಯ ರೈಲ್ವೆ

Published 16 ಮಾರ್ಚ್ 2024, 1:26 IST
Last Updated 16 ಮಾರ್ಚ್ 2024, 1:26 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು-ಕೊಚುವೇಲಿ ನಿಲ್ದಾಣಗಳ ನಡುವೆ ಮಾರ್ಚ್‌ 23 ಮತ್ತು 30ರಂದು ರಾತ್ರಿ 11.55ಕ್ಕೆ ವಿಶೇಷ ರೈಲು ಎರಡು ಟ್ರಿಪ್‌ ಸಂಚರಿಸಲಿವೆ. ಮಾರ್ಚ್‌ 24, 31ರಂದು ರಾತ್ರಿ 10ಕ್ಕೆ ಕೊಚುವೇಲಿಯಿಂದ ವಾಪಸ್‌ ಹೊರಡಲಿವೆ.

ಎಸ್ಎಂವಿಟಿ ಬೆಂಗಳೂರು-ಕಣ್ಣೂರು ನಿಲ್ದಾಣಗಳ ನಡುವೆ ಮಾರ್ಚ್‌ 19 ಮತ್ತು 26ರಂದು ರಾತ್ರಿ 11.55ಕ್ಕೆ ವಿಶೇಷ ರೈಲು ಎರಡು ಟ್ರಿಪ್‌ ಸಂಚರಿಸಲಿವೆ. ಮಾರ್ಚ್‌ 20 ಮತ್ತು 27ರಂದು ರಾತ್ರಿ 8ಕ್ಕೆ ಕಣ್ಣೂರಿನಿಂದ ವಾಪಸ್‌ ಹೊರಡಲಿವೆ.

ಹುಬ್ಬಳ್ಳಿ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ-ಅಹಮದಾಬಾದ್ ನಿಲ್ದಾಣಗಳ ನಡುವೆ ಮಾರ್ಚ್‌ 24ರಂದು ರಾತ್ರಿ 7.30ಕ್ಕೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ. ಮಾರ್ಚ್‌ 25ರಂದು ರಾತ್ರಿ 9.25ಕ್ಕೆ ಅಹಮದಾಬಾದ್‌ನಿಂದ ವಾಪಸ್‌ ಹೊರಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT