ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ: ಬೆಳಗ್ಗಿನಿಂದಲೂ ಟ್ರಾಫಿಕ್ ಜಾಮ್

Last Updated 3 ಡಿಸೆಂಬರ್ 2019, 9:56 IST
ಅಕ್ಷರ ಗಾತ್ರ

ಬೆಂಗಳೂರು: ಹೊಸೂರು ರಸ್ತೆಯ ವೈಟ್‌ ಟಾಪಿಂಗ್ ಕಾಮಗಾರಿಯನ್ನು ಇಂದು ಆರಂಭಿಸಿರುವುದರಿಂದಡೈರಿ ಸರ್ಕಲ್‌ನಿಂದ ಫೋರಂ ಮಾಲ್‌ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.

ಮುಂಜಾವಿನಿಂದಲೂ ಎರಡೂಬದಿಯಲ್ಲಿ ಮಂದಗತಿಯಲ್ಲಿ ವಾಹನಗಳು ಸಾಗುತ್ತಿದ್ದು,ವಾಹನ ಸವಾರರು ಪರದಾಡುವಂತಾಗಿದೆ.

ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಿರುವುದರಿಂದಸದಾ ಬ್ಯುಸಿಯಾಗಿರುವ ಹೊಸೂರು ರಸ್ತೆಯಿಂದಡೈರಿ ಸರ್ಕಲ್‌ ಕಡೆ ತೆರಳುವ ರಸ್ತೆಯು ಇಂದಿನಿಂದ ಎರಡು ತಿಂಗಳ ಕಾಲ ಮುಚ್ಚಲಾಗುತ್ತದೆ.

ಡೈರಿ ಸರ್ಕಲ್ ಸಮೀಪದ ಡಾ. ಮರಿಗೌಡ ರಸ್ತೆ ಮತ್ತು ಹೊಸೂರು ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯು 1.4 ಕಿ.ಮೀ. ಉದ್ದವಿದೆ.

ವಾಹನ ಸವಾರರು ಡೈರಿ ಸರ್ಕಲ್‌ನಿಂದ ಮೈಕೊ ರೋಡ್‌ ಕ್ರಾಸ್‌ನಲ್ಲಿ ಬನ್ನೇರುಘಟ್ಟ ರಸ್ತೆಗೆ ಹೊರಳಿ, ಅಲ್ಲಿಂದ ಫೋರಂ ಮಾಲ್ ಮತ್ತು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ಕಡೆಗೆ ಸಾಗಿ ಹೊಸೂರು ರಸ್ತೆ ತಲುಪಬೇಕು.

ಕಾಮಗಾರಿ ನಡೆಯುತ್ತಿರುವುದರಿಂದಾಗಿ ಬಿಬಿಎಂಪಿಯು ಈಗಾಗಲೇ ಪರ್ಯಾಯ ಮಾರ್ಗಗಳ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಎರಡು ತಿಂಗಳು ರಸ್ತೆ ಬಂದ್ ಮಾಡಲು ಪೊಲೀಸರಿಂದ ಪಡೆದ ಅನುಮತಿ ಪತ್ರವನ್ನು ಕೂಡ ಒದಗಿಸಿದೆ.

2017ರಲ್ಲಿ ಜಾರಿಯಾಗಿದ್ದ ಮೊದಲನೇ ಹಂತದ ವೈಟ್ ಟಾಪಿಂಗ್ ಕಾಮಗಾರಿಯ ಎರಡನೇ ಅನುದಾನದಲ್ಲಿ ಕಾಮಗಾರಿಯನ್ನುಕೈಗೆತ್ತಿಕೊಳ್ಳಲಾಗಿದೆ. 2017ರಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಪಾಲಿಕೆ ಬಯಸಿತ್ತಾದರೂ ಮೆಟ್ರೋ ಕೆಲಸ ಮತ್ತು ಟ್ರಾಫಿಕ್ ಬೇರೆಡೆ ವರ್ಗಾಯಿಸಲು ಪೊಲೀಸರಿಂದ ಅನುಮತಿ ದೊರಕಲು ತಡವಾಗಿದ್ದಕ್ಕೆ ಕಾಮಗಾರಿ ಬಾಕಿ ಉಳಿದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT