ಬೆಂಗಳೂರು: ಮೂರು ತಿಂಗಳ ಬಳಿಕ ತವರಿನಿಂದ ಬಂದ ಪತ್ನಿಗೆ ಬಾಗಿಲು ತೆಗೆಯಲು ಪತಿ ಹಿಂದೇಟು ಹಾಕಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರ್ಚ್‌ನಲ್ಲಿ ಪತ್ನಿ ಚಂಡೀಗಡದಲ್ಲಿರುವ ತವರಿಗೆ ಹೋಗಿದ್ದರು. ದಿಢೀರ್ ಲಾಕ್‍ಡೌನ್ ಆಗಿದ್ದರಿಂದ ಅಲ್ಲಿಯೇ ಉಳಿದಿದ್ದರು. ಪತಿ ಮತ್ತು 10 ವರ್ಷದ ಮಗ ಮಾತ್ರ ಬೆಂಗಳೂರಿನಲ್ಲಿದ್ದರು. ಸದ್ಯ ಮಹಿಳೆ ಬೆಂಗಳೂರಿಗೆ ಬಂದಿದ್ದಾರೆ. ಆದರೆ, ಮಹಿಳೆಗೆ ಗಂಡ ಬಾಗಿಲು ತೆರೆಯದೇ ಶಾಕ್ ನೀಡಿದ್ದಾರೆ ಎನ್ನಲಾಗಿದೆ.

ಮೂರು ತಿಂಗಳ ಬಳಿಕ ಬಂದ ಪತ್ನಿಯನ್ನು ಪತಿ ಮನೆ ಹೊರಗೆ ನಿಲ್ಲಿಸಿದ್ದಾರೆ. 14 ದಿನ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಕೋವಿಡ್ ಪರೀಕ್ಷೆ ವರದಿ ಬಂದ ಬಳಿಕ ಹೊರ ಬರುವುದಾಗಿ ಪತ್ನಿ ಹೇಳಿದರೂ ಬಾಗಿಲು ತೆಗೆದಿಲ್ಲ. ಮಹಿಳೆ ವರ್ತೂರು ಠಾಣೆಯ ಪೊಲೀಸರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ಕೇಳಿದ್ದಾರೆ.

ಪೊಲೀಸರು ಫೋನ್ ಮಾಡಿದರೆ ಪತಿ ರಿಸೀವ್ ಮಾಡಿಲ್ಲ. ಪೊಲೀಸರು ಮನೆಗೆ ಬರಬಹುದೆಂದು ತಿಳಿದು ಬೀಗ ಹಾಕಿಕೊಂಡು ಪರಾರಿ ಆಗಿದ್ದಾರೆ. ಮಹಿಳೆಗೆ ಆಕೆಯ ಸಂಬಂಧಿಕರ ಮನೆಯಲ್ಲಿ ಇರಿಸುವ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.