ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಡಿಬಿಐ ಬ್ಯಾಂಕ್‌ ವ್ಯವಸ್ಥಾಪಕಿ ಬಂಧನ

ಬೇರೆ ಖಾತೆಗಳಿಗೆ ₹4.92 ಕೋಟಿ ಹಣ ವರ್ಗಾವಣೆ ಮಾಡಿ ವಂಚನೆ
Last Updated 29 ಜನವರಿ 2023, 19:54 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರ ಬ್ಯಾಂಕ್‌ ಖಾತೆಗಳಿಂದ ಬೇರೆ ಬೇರೆ ಬ್ಯಾಂಕ್‌ ಖಾತೆಗಳು ಹಾಗೂ ಎಲ್‌ಐಸಿ ಬಾಂಡ್‌ಗಳಿಗೆ ₹4.92 ಕೋಟಿ ಹಣವನ್ನು ವರ್ಗಾವಣೆ ಮಾಡಿ ವಂಚಿಸಿದ್ದ ಐಡಿಬಿಐ ಬ್ಯಾಂಕ್‌ನ ಮಿಷನ್‌ ರಸ್ತೆ ಶಾಖೆಯ ಗ್ರಾಹಕ ಸಂಪರ್ಕ ವ್ಯವಸ್ಥಾಪಕಿ ಸಜೀಲಾ ಗುರುಮೂರ್ತಿ (34) ಅವರನ್ನು ಸಂಪಂಗಿರಾಮನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯ ಸಜೀಲಾ ಅವರು ನಗರದ ಭಾರತಿನಗರದ ಹುಣಸೇಮಾರೇನಹಳ್ಳಿ
ಯಲ್ಲಿ ನೆಲೆಸಿದ್ದರು. ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್‌ ಎಸ್‌.ಎನ್‌.ಸಂಗಮೇಶ್ವರ ದೂರು ನೀಡಿದ್ದರು.

‘ಸುಜೀಲಾ ಅವರನ್ನು ಬಂಧಿಸಿ 3ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಜೂನ್‌ 13ರಿಂದ ಡಿಸೆಂಬರ್‌ 21ರ ತನಕ ಬ್ಯಾಂಕ್‌ನಲ್ಲಿ ಸುಜೀಲಾ ವ್ಯವಸ್ಥಾಪಕಿಯಾಗಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ವಂಚನೆ ನಡೆಸಿರುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

‘ಗ್ರಾಹಕರ ಅರಿವಿಗೆ ಬಾರದಂತೆ ಅವರ ಖಾತೆಯಿಂದ ಹಣ ತೆಗೆದು ಎಲ್‌ಐಸಿ ಬಾಂಡ್‌ಗಳಲ್ಲಿ ತೊಡಗಿಸುತ್ತಿದ್ದರು. ಹೀಗೆ ₹1.44 ಕೋಟಿ ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕ್‌ನ ಗಾಂಧಿನಗರ ಶಾಖೆಯಲ್ಲೂ ಸುಜೀಲಾ ಕೆಲಸ ಮಾಡುವಾಗಲೂ ಹೀಗೇ ಎಲ್‌ಐಸಿ ಬಾಂಡ್‌ಗಳ ಮೇಲೆ ಗ್ರಾಹಕರ ಹಣ ತೊಡಗಿಸಿದ್ದರು. ಮಿಷನ್‌ ರಸ್ತೆಯ ಶಾಖೆಯಲ್ಲಿ ಡಿ.23ರಂದು ಒಂದೇ ದಿನ ₹4.92 ಕೋಟಿಯನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಐಡಿಬಿಐ ಬ್ಯಾಂಕ್‌ ಜತೆಗೆ ಎಲ್‌ಐಸಿ ಒಪ್ಪಂದ ಮಾಡಿಕೊಂಡಿತ್ತು. ಇದನ್ನೇ ದುರ್ಬಳಕೆ ಮಾಡಿಕೊಂಡಿದ್ದ ಸುಜೀಲಾ, ಕಮಿಷನ್‌ ಆಸೆಗೆ ಗ್ರಾಹಕರ ಒಪ್ಪಿಗೆ ಪಡೆಯದೆ ಎಲ್‌ಐಸಿ ಬಾಂಡ್ ಮೇಲೆ ಹಣ ತೊಡಗಿಸುತ್ತಿದ್ದರು. ಆರೋಪಿಯಿಂದ ಒಂದು ಕಂಪ್ಯೂಟರ್‌ ಹಾಗೂ ₹23 ಲಕ್ಷ ಮೊತ್ತದ ಬಾಂಡ್‌ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT