ಭಾನುವಾರ, ಮೇ 22, 2022
22 °C
47ನೇ ಘಟಿಕೋತ್ಸವ: 9 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಐಐಎಂ:690 ವಿದ್ಯಾರ್ಥಿಗಳಿಗೆ ಪದವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂ) 47ನೇ ಘಟಿಕೋತ್ಸ ವದಲ್ಲಿ ಶನಿವಾರ 690 ವಿದ್ಯಾರ್ಥಿಗಳಿ ಗೆ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ ಪಿಎಚ್.ಡಿ ಪದವಿ ಪಡೆದವರೂ ಇದ್ದಾರೆ. 9 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ.

‘2020-22ನೇ ಸಾಲಿನ ಪ್ರೋಗ್ರಾಮ್‌ ಇನ್ ಮ್ಯಾನೇಜ್‍ಮೆಂಟ್‍ನ ಸ್ನಾತಕೋತ್ತರ ಪದವಿಯಲ್ಲಿ ಪ್ರತ್ಯೂಷ್ ಗೋಯಲ್ ಮೊದಲ ರ‍್ಯಾಂಕ್‌ ಪುರಸ್ಕೃತರಾದರೆ, ಅವಿರುದ್ಧ್ ಜೈನ್ ಮತ್ತು ಪ್ರಿಯಾಂಕ್ ದೇಡಿಯಾ ಎರಡನೇ ರ‍್ಯಾಂಕ್‌ ಪಡೆದರು.

‘ಪ್ರೋಗ್ರಾಮ್–ಇನ್–ಮ್ಯಾನೇಜ್‍ಮೆಂಟ್‍’ ಸ್ನಾತಕೋತ್ತರ ಪದವಿ (ಪಿಜಿಪಿ) ಮತ್ತು ಬ್ಯುಸಿನೆಸ್ ಅನಾಲಿಟಿಕ್ಸ್ ಸ್ನಾತಕೋತ್ತರ ವಿಭಾಗದ (ಪಿಜಿಪಿ-ಬಿಎ) ಎರಡೂ ಕೋರ್ಸ್‌ಗಳಲ್ಲಿ ಅತ್ಯುತ್ತಮ ಸಾಧನೆಗಾಗಿ ಮೈಥಿಲಿ ಅವರು ಚಿನ್ನದ ಪದಕ ಪಡೆದರು. ಬ್ಯುಸಿನೆಸ್ ಅನಾಲಿಟಿಕ್ಸ್‌ ಸ್ನಾತಕೋತ್ತರ ಪದವಿಯಲ್ಲಿ ಜೀವನ್ ನಾಗರಾಜ್ ಮೊದಲ ರ‍್ಯಾಂಕ್‌ ಪಡೆದರು. ‘ಇಪಿಜಿಪಿ’ ಕೋರ್ಸ್‌ನಲ್ಲಿ ಬೆಂಡಿ ಅಶೋಕ್ ಕುಮಾರ್ ಮೊದಲ ರ‍್ಯಾಂಕ್‌ ಮತ್ತು ರಂಗನಾಥನ್ ಶೇಖರ್ ಅತ್ಯುತ್ತಮ ಆಲ್‍ರೌಂಡ್ ಸಾಧನೆಯ ಗೌರವ ಪಡೆದರು.

ಎಂಟರ್‌ಪ್ರೈಸಸ್‌ ಮ್ಯಾನೇಜ್‍ಮೆಂಟ್‍ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ (ಪಿಜಿಪಿಇಎಂ) ರೋಹನ್ ಬಜಲಾ ಮೊದಲ ರ‍್ಯಾಂಕ್‌ ಪಡೆದರೆ, ಡಿ.ಉಮೇಶ್ ಸರ್ವತೋಮುಖ ಸಾಧನೆಯ ಗೌರವ ಪಡೆದರು.

ಸಂಸ್ಥೆಯ ಸಾಧನೆಗಳನ್ನು ವಿವರಿಸಿದ ನಿರ್ದೇಶಕ ಪ್ರೊ.ರಿಷಿಕೇಶ ಟಿ. ಕೃಷ್ಣನ್ ಅವರು, ‘2023ರಲ್ಲಿ ಪದವಿಪೂರ್ವ ಕೋರ್ಸ್‌ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಅರ್ಥಶಾಸ್ತ್ರ, ಮನೋವಿಜ್ಞಾನ ಮತ್ತು ಡೇಟಾ ವಿಜ್ಞಾನ ಮತ್ತು ಪರಿಸರ ಸುಸ್ಥಿರತೆ ಕುರಿತ ಕೋರ್ಸ್‌ಗಳನ್ನು ಸಂಸ್ಥೆಯ ಹೊಸ ಪ್ರಾಂಗಣದಲ್ಲಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ಸಂಸ್ಥೆಯ ಸಾಧನೆಗಳು, ಡಿಜಿಟಲ್ ಕಲಿಕೆ, ಹಿರಿಯ ವಿದ್ಯಾರ್ಥಿಗಳ ಕೊಡುಗೆಗಳನ್ನು ವಿವರಿಸಿದರು. ಎಜೆಡ್‍ಬಿ ವ್ಯವಸ್ಥಾಪಕ ಪಾಲುದಾರ ಮತ್ತು ಸಹಸ್ಥಾಪಕರಾದ ಜಿಯಾ ಮೋದಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು