ಬೊಮ್ಮನಹಳ್ಳಿ: ಎಲೆಕ್ಟ್ರಾನಿಕ್ ಸಿಟಿಯ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ - ಬೆಂಗಳೂರು (ಐಐಐಟಿ–ಬಿ) ಸಂಸ್ಥೆಯಲ್ಲಿ ನಡೆದ ಕ್ಯಾಂಪಸ್ ಆಯ್ಕೆಯಲ್ಲಿ ಐಎಂಟೆಕ್ ವಿದ್ಯಾರ್ಥಿ ಮೋಂಜಾಯಿ ನಾರಾಯಣ ಚೌಧರಿ ದಾಖಲೆಯ ವಾರ್ಷಿಕ ₹1.45 ಕೋಟಿ ಪ್ಯಾಕೇಜ್ ಪಡೆದುಕೊಂಡರು.

ಸಂಸ್ಥೆಯ 25ನೇ ಘಟಿಕೋತ್ಸವ ಮತ್ತು ಸಂಸ್ಥೆಯ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯಲ್ಲಿ 261 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಗೊಂಡಿದ್ದಾರೆ. 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ ₹60 ಲಕ್ಷ, 67 ವಿದ್ಯಾರ್ಥಿಗಳು ₹40 ಲಕ್ಷ ಮತ್ತು 180 ವಿದ್ಯಾರ್ಥಿಗಳು ವಾರ್ಷಿಕ ₹20 ಲಕ್ಷ ಪ್ಯಾಕೇಜ್ ಪಡೆದಿದ್ದಾರೆ ಎಂದು ಸಂಸ್ಥೆಯ ಐಐಐಟಿ-ಬೆಂಗಳೂರಿನ ನಿರ್ದೇಶಕ ಪ್ರೊ. ದೇಬಬ್ರತ ದಾಸ್ ಹೇಳಿದರು.

‘ಜಾಗತಿಕ ಹ್ಯಾಕಥಾನ್ಗಳು, ಪ್ರತಿಷ್ಠಿತ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಕಟವಾದ ಉನ್ನತ ಸಂಶೋಧನೆ ಮತ್ತು ಸ್ಪರ್ಧಾತ್ಮಕ ವಿದ್ಯಾರ್ಥಿ ವೇತನಗಳು ಮತ್ತು ಅನುದಾನಗಳನ್ನು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸ್ವೀಕರಿಸಿರುವುದು ಅವರ ಶ್ರಮಕ್ಕೆ ಸಿಕ್ಕ ಮನ್ನಣೆಯಾಗಿದೆ. ಹಲವಾರು ವಿದ್ಯಾರ್ಥಿಗಳು ಪೇಟೆಂಟ್ಗಳನ್ನು ಪಡೆದುಕೊಂಡಿದ್ದಾರೆ, ವಿದ್ಯಾರ್ಥಿಗಳ ವೈವಿಧ್ಯವೇ ಅವರ ಶಕ್ತಿ ಮತ್ತು ಅವರ ಉದ್ದೇಶದಲ್ಲಿ ಏಕತೆಯನ್ನು ದೃಢೀಕರಿಸುತ್ತದೆ’ ಎಂದರು.

ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ‘ವಿದ್ಯಾರ್ಥಿಗಳು ಎಐ–ಮಷಿನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್, ವೈರ್ಲೆಸ್ ಸಂವಹನ, ನೆಟ್ವರ್ಕಿಂಗ್, ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ವಿಎಲ್ಎಸ್ಐ ಮತ್ತು ಅಡ್ವಾನ್ಸ್ಡ್ ಸಾಫ್ಟ್ವೇರ್ ಸಿಸ್ಟಮ್ಸ್ ಮತ್ತು ಡಿಜಿಟಲ್ ಸೊಸೈಟಿ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ಮತ್ತು ಸಾಧನೆ ಪ್ರದರ್ಶಿಸುತ್ತಿದ್ದಾರೆ. ಇದು ಹೆಮ್ಮೆಯ ವಿಷಯ, ಇದರ ಜತೆಗೆ ಸಂಶೋಧನೆಯತ್ತಲೂ ಗಮನ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ವಾಲಿಪಿರೆಡ್ಡಿ ಪ್ರಣತಿ (ಎಂ.ಟೆಕ್), ಮೊಂಜಾಯ್ ನಾರಾಯಣ ಚೌಧರಿ (ಐಎಂಟೆಕ್) ಮತ್ತು ಸೂಕ್ತಿ ಭಟ್ ಕಾವ್ (ಎಂ.ಎಸ್ಸಿ ಡಿಜಿಟಲ್ ಸೊಸೈಟಿ) ಚಿನ್ನದ ಪದಕಗಳನ್ನು ಪಡೆದರು. ಎನ್. ರಾಮರಾವ್ ವರ್ಷದ ಉದ್ಯಮಿ ಪದಕವನ್ನು ಆನಂದ ಪ್ರಕಾಶ್ ವರ್ಮಾ ಮುಡಿಗೇರಿಸಿಕೊಂಡರು.

ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಡಾ. ವೆಂಕಟ್ ಪದ್ಮನಾಭನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಐಐಐಟಿ -ಬೆಂಗಳೂರು ಆಡಳಿತ ಮಂಡಳಿಯ ಅಧ್ಯಕ್ಷರಾದ ಪದ್ಮಭೂಷಣ ಶ್ರೀ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಐಐಐಟಿ-ಬೆಂಗಳೂರಿನ ನಿರ್ದೇಶಕ ಪ್ರೊ. ದೇಬಬ್ರತ ದಾಸ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.