ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಜೊತೆಗೆ ಅಂಬೇಡ್ಕರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ– ಗೌರಿಶಂಕರ್‌

Published 17 ಏಪ್ರಿಲ್ 2024, 5:13 IST
Last Updated 17 ಏಪ್ರಿಲ್ 2024, 5:13 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲಾ ನಾಗರಿಕರು ಶಿಕ್ಷಣದ ಜೊತೆಗೆ ಅಂಬೇಡ್ಕರ್‌ ಅವರ ಆದರ್ಶಗಳನ್ನು ಪಾಲನೆ ಮಾಡಿದರೆ ವ್ಯಕ್ತಿಗಳು ಮತ್ತು ನಾಡು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಗೌರಿಶಂಕರ್‌ ಬೆಡಸೂರೆ ತಿಳಿಸಿದರು.

ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾವು ಪ್ರತಿ ವರ್ಷ ಅಂಬೇಡ್ಕರ್‌ ಜಯಂತಿ ಮಾಡಿದರೆ ಸಾಲದು, ಅವರ ಆದರ್ಶ, ತತ್ವ, ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಗೌರಿಶಂಕರ್‌ ಹೇಳಿದರು.

ನಾವು ಅಂಬೇಡ್ಕರ್‌ ಹೇಳಿದಂತೆ ಶಿಕ್ಷಣವನ್ನು ಪಡೆಯಬೇಕು, ಆಗ ಮಾತ್ರ ಸಾಮಾಜಿಕವಾಗಿ ಎಲ್ಲ ಸ್ಥಾನ ಮಾನಗಳನ್ನು ಪಡೆಯಲು ಸಾಧ್ಯ. ಈ ಜಾತಿ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೇ ಮದ್ದಾಗಿದೆ. ಆದ್ದರಿಂದ ಅಂಬೇಡ್ಕರ್‌ ಶಿಕ್ಷಣದ ಮೂಲಕ ಜಾತಿ ಪದ್ಧತಿ ವಿರುದ್ಧ ಹೋರಾಡಿದರು. ಜಾತಿಯ ಕೂಪದಿಂದ ಹೊರ ಬರುವಂತೆ ದೇಶದ ಜನತೆಗೆ ಕರೆ ಕೊಟ್ಟರು ಎಂದು ಅಂಬೇಡ್ಕರ್‌ ಆದರ್ಶ ಸೇನೆ ಸಂಸ್ಥಾಪಕರು, ರಾಜ್ಯಾಧ್ಯಕ್ಷರು ಆದ ಚಂದ್ರಶೇಖರ್‌ ಹೇಳಿದರು.

ಇಲ್ಲಿನ ಬಸವೇಶ್ವರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರಿಶಂಕರ್‌ ಬೆಡಸೂರೆ ಅಂಬೇಡ್ಕರ್‌ ಆದರ್ಶ ಸೇನೆ ಗೌರವ ಅಧ್ಯಕ್ಷರು, ಗೌರವ ಸಲಹೆಗಾರರು, ಚಂದ್ರಶೇಖರ್‌ ಅಂಬೇಡ್ಕರ್‌ ಆದರ್ಶ ಸೇನೆ ಸಂಸ್ಥಾಪಕರು, ರಾಜ್ಯಾಧ್ಯಕ್ಷರು, ಚೇತನ್‌ ಕರುನಾಡು ಸೇನೆ ಅಧ್ಯಕ್ಷರು, ಶಶಿಕಲಾ ಕರುನಾಡು ಸೇನೆ ಮಹಿಳಾ ಅಧ್ಯಕ್ಷರು, ಎಂ. ಸಿ ವಿನೂತನ್‌ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT