ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಪ್‌ಕಾಮ್ಸ್‌: ಆನ್‌ಲೈನ್‌ ಗ್ರಾಹಕರ ಸಂಖ್ಯೆ ಏರಿಕೆ, ವ್ಯಾಪಾರ ಚೇತರಿಕೆ

ಜನರಿಂದ ಉತ್ತಮ ಸ್ಪಂದನೆ * ಸೇವೆ ವಿಸ್ತರಣೆಗೆ ಸಂಸ್ಥೆ ಸಿದ್ಧತೆ
Last Updated 23 ಡಿಸೆಂಬರ್ 2021, 19:53 IST
ಅಕ್ಷರ ಗಾತ್ರ

ಬೆಂಗಳೂರು: ತರಕಾರಿ, ಹಣ್ಣು, ಸೊಪ್ಪು ಸೇರಿದಂತೆ ಅಗತ್ಯ ಉತ್ಪನ್ನಗಳನ್ನುಮನೆ ಬಾಗಿಲಿಗೆ ತಲುಪಿ‌ಸುತ್ತಿರುವತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘದ (ಹಾಪ್‌ಕಾಮ್ಸ್‌)ಆನ್‌ಲೈನ್‌ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಉತ್ಪನ್ನಗಳನ್ನು ಖರೀದಿಸುವರ ಸಂಖ್ಯೆ ಗಣನೀಯವಾಗಿ ಏರಿದೆ.

ಗ್ರಾಹಕರ ಸಂಖ್ಯೆ ಕ್ಷೀಣಿಸಿದ್ದ ಮಳಿಗೆಗಳ ವ್ಯಾಪ್ತಿಯಲ್ಲಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಸಂಸ್ಥೆ ಈ ಆನ್‌ಲೈನ್‌ ಸೇವೆಯನ್ನು ಉಚಿತವಾಗಿ ನೀಡಲು ಆರಂಭಿಸಿತ್ತು. ಗ್ರಾಹಕರ ಅನುಕೂಲಕ್ಕಾಗಿ ಆನ್‌ಲೈನ್‌ ಸೇವೆಯನ್ನು ಬೆಂಗಳೂರು ದಕ್ಷಿಣ ಭಾಗದಕೋರಮಂಗಲದ ನ್ಯಾಷನಲ್ ಗೇಮ್ಸ್‌ ವಿಲೇಜ್‌ (ಎನ್‌ಜಿವಿ) ಸಮೀಪದಹಾಪ್‌ಕಾಮ್ಸ್‌ ಮಳಿಗೆಯಲ್ಲಿ 2021ರ ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಗ್ರಾಹಕರ ಸ್ಪಂದನೆ ಆಧರಿಸಿ ನಗರದಾದ್ಯಂತ ಇರುವ ಬೇರೆ ಹಾಪ್‌ಕಾಮ್ಸ್‌ ಮಳಿಗೆಗಳಿಗೂ ಈ ಸೇವೆ ವಿಸ್ತರಿಸುವುದಾಗಿ ಸಂಸ್ಥೆ ತಿಳಿಸಿತ್ತು.

ಇದಕ್ಕಾಗಿ ಸಂಸ್ಥೆ ಹೊರತಂದಿರುವ ನೂತನ ‘ಆನ್‌ಲೈನ್‌ ಸ್ಟೋರ್‌’ ಆ್ಯಪ್‌ ಹಾಗೂ ಪೋರ್ಟಲ್‌ ಮೂಲಕಗ್ರಾಹಕರು ಮನೆಯಿಂದಲೇ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಲು ಒಲವು ತೋರಿದ್ದಾರೆ. ಇಂತಹ ಗ್ರಾಹಕರ ಸಂಖ್ಯೆಯೂ ಮೂರು ತಿಂಗಳಲ್ಲಿ ಏರಿಕೆ ಕಂಡಿದೆ.

‘ಪ್ಯಾಕಿಂಗ್ ಮತ್ತು ಡೆಲಿವರಿ ಸಂಸ್ಥೆಯೊಂದರ ಪಾಲುದಾರಿಕೆಯಲ್ಲಿಆನ್‌ಲೈನ್‌ ಸೇವೆ ಒದಗಿಸುತ್ತಿದ್ದೇವೆ. ಆರಂಭದಲ್ಲಿ 10 ಮಂದಿ ಆನ್‌ಲೈನ್ ಸೇವೆ ಬಳಸುತ್ತಿದ್ದರು. ಈಗ ಸಂಸ್ಥೆಯ ಉತ್ಪನ್ನಗಳನ್ನು ಮನೆಗೆ ತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ’ ಎಂದುಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನ್‌ಲೈನ್‌ ಸೇವೆ ಆರಂಭಗೊಂಡ ಮೊದಲ ವಾರದಲ್ಲಿ ಸುಮಾರು ₹14 ಸಾವಿರದಷ್ಟು ವಹಿವಾಟು ನಡೆದಿತ್ತು. ಈಗ ದಿನಕ್ಕೆ ₹12 ಸಾವಿರದಷ್ಟು ವ್ಯಾಪಾರ ನಡೆಯುತ್ತಿದೆ. ತಿಂಗಳಿಗೆ ಒಟ್ಟಾರೆ ₹3 ಲಕ್ಷದವರೆಗೆ ವಹಿವಾಟು ಏರಿಕೆ ಕಂಡಿದೆ. ಆನ್‌ಲೈನ್‌ ಸೇವೆ ಆರಂಭಗೊಂಡ ನಂತರ ಸಂಸ್ಥೆಯ ಮಳಿಗೆಗಳಲ್ಲಿ ವ್ಯಾಪಾರ ವೃದ್ಧಿಯಾಗುತ್ತಿದೆ’ ಎಂದರು.

ಹಾಪ್‌ಕಾಮ್ಸ್‌ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿರುವ ‘ಕೋಡ್‌ ಕೆಟಲಿಸ್ಟ್‌’ ಸಂಸ್ಥೆಯ ನಿರ್ದೇಶಕ ಜಿ.ಪ್ರಸಾದ್‌,‘ಬಸವನಗುಡಿ, ಜಯನಗರ, ಜೆ.ಪಿ.ನಗರ, ಬನಶಂಕರಿ, ಕತ್ರಿಗುಪ್ಪೆ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದ ಗ್ರಾಹಕರು ಹೆಚ್ಚಾಗಿ ಆನ್‌ಲೈನ್ ಸೇವೆ ಬಳಸುತ್ತಿದ್ದಾರೆ. ಗ್ರಾಹಕರ ಮನವಿ ಮೇರೆಗೆ ಬೇರೆ ಕಡೆಗೂ ಉತ್ಪನ್ನಗಳನ್ನು ತಲುಪಿಸಲಾಗುತ್ತಿದೆ.‌ ನಗರದಾದ್ಯಂತ ಮುಂದಿನ ವಾರದಿಂದ ಆನ್‌ಲೈನ್ ಸೇವೆ ಲಭ್ಯವಾಗಲಿದೆ’ ಎಂದರು.

ಆನ್‌ಲೈನ್‌ ಸೇವೆ ಹೇಗೆ?
‘ಗುಣಮಟ್ಟದ ಉತ್ಪನ್ನಗಳನ್ನು ಮನೆಗೆ ತರಿಸಿಕೊಳ್ಳಲು ಇಚ್ಛಿಸುವ ಗ್ರಾಹಕರು https://play.google.com/store/apps/details?id=f2c.hopcoms.online ಅಥವಾhttps://hopcomsonline.in/ ಮೂಲಕ ಹಾಪ್‌ಕಾಮ್ಸ್‌ ಆನ್‌ಲೈನ್‌ ಸೇವೆ ತಂತ್ರಾಂಶವನ್ನು ಬಳಸಬಹುದು.

ಇದು ಆ್ಯಪ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರಿಗೆ ಈ ಕೊಂಡಿ ಮೂಲಕ ಆನ್‌ಲೈನ್ ಸ್ಟೋರ್‌ ಸಂಪರ್ಕ ಲಭ್ಯ.

ಸಂಸ್ಥೆಯ ಎಲ್ಲ ಉತ್ಪನ್ನಗಳು ಹಾಗೂ ಅವುಗಳ ದರ ಸಹಿತ ಮಾಹಿತಿ ಅಲ್ಲಿ ಸಿಗಲಿದೆ.

ಬೇಡಿಕೆ ಸಲ್ಲಿಸಿದಷ್ಟು ಉತ್ಪನ್ನಗಳನ್ನು ಸಿಬ್ಬಂದಿ ಗ್ರಾಹಕರ ಮನೆಗೆ ತಲುಪಿಸುತ್ತಾರೆ’ ಎಂದು ಜಿ.ಪ್ರಸಾದ್‌ ವಿವರಿಸಿದರು.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8951395439

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT