ಶುಕ್ರವಾರ, ಏಪ್ರಿಲ್ 16, 2021
23 °C
ಆಗಸ್ಟ್ 1ರಿಂದಲೇ ಜಾರಿಯಾಗಲಿದೆ ಪರಿಷ್ಕೃತ ವೇತನ

ಪೊಲೀಸರ ವೇತನ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಪೊಲೀಸ್ ಅಧಿಕಾರಿಗಳ ವೇತನ ಹೆಚ್ಚಳ ಮಾಡಿ ಮಂಗಳವಾರ ಸರ್ಕಾರ ಆದೇಶಿಸಿದೆ.

ಕಾನ್‌ಸ್ಟೆಬಲ್‌ಗಳಿಗೆ ಕಷ್ಟ ಪರಿಹಾರ ಭತ್ಯೆಯನ್ನು ₹1 ಸಾವಿರದಿಂದ 2 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಆಗಸ್ಟ್ 1ರಿಂದ ಪರಿಷ್ಕೃತ ವೇತನ ಪೊಲೀಸ್ ಸಿಬ್ಬಂದಿಗೆ ಸಿಗಲಿದೆ.

‘6ನೇ ವೇತನ ಆಯೋಗದ ಶಿಫಾರಸು ಹಾಗೂ ರಾಘವೇಂದ್ರ ಔರಾದಕರ ವರದಿಯನ್ನು ಒಟ್ಟುಗೂಡಿಸಿ, ವೇತನ ಪರಿಷ್ಕರಿಸಲಾಗಿದೆ. ಔರಾದಕರ ವರದಿಯನ್ನು ಯಥಾವತ್ ಜಾರಿಮಾಡಿಲ್ಲ. ಇತರೆ ಇಲಾಖೆಗಳಲ್ಲಿ ನೌಕರರು ಪಡೆಯುತ್ತಿರುವ ವೇತನವನ್ನು ಪರಿಗಣಿಸಿ ಪೊಲೀಸ್ ಇಲಾಖೆ ಸಿಬ್ಬಂದಿ ವೇತನ ಹೆಚ್ಚಳ ಮಾಡಲಾಗಿದೆ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಸಬ್‌ಇನ್‌ಸ್ಪೆಕ್ಟರ್, ಡಿವೈಎಸ್‌ಪಿ ಹಂತದ ಅಧಿಕಾರಿಗಳ ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಜೂನ್ 14ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿತ್ತು. ಸರ್ಕಾರ 2016ರ ಜೂನ್‌ನಲ್ಲಿ ಎಡಿಜಿಪಿ ರಾಘವೇಂದ್ರ ಔರಾದಕರ ಸಮಿತಿ ರಚಿಸಿತ್ತು.

ಸಮಿತಿ ರಚನೆಯಾದ ಮೂರೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅಂದಿನಿಂದ ವರದಿ ಜಾರಿ ಬಗ್ಗೆ ಚರ್ಚೆಗಳು ನಡೆದಿದ್ದರೂ ಈವರೆಗೂ ಜಾರಿಯಾಗಿರಲಿಲ್ಲ.

ಹುದ್ದೆ;2012ರ ಮೂಲವೇತನ; ಪರಿಷ್ಕೃತ(₹)

ಕಾನ್‌ಸ್ಟೆಬಲ್;11,600;23,500

ಹೆಡ್‌ಕಾನ್‌ಸ್ಟೆಬಲ್;12,500;27,650

ಎಎಸ್‌ಐ;14,550;30,350

ಇನ್‌ಸ್ಪೆಕ್ಟರ್;21,600;43,100

ಎಸ್‌.ಪಿ(ಐಪಿಎಸ್ ಅಲ್ಲದ);36,300;70,850

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು