ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕರ ನೇಮಕ ನಾಟಕೀಯ ತಿರುವು

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಪೂರ್ಣಾವಧಿ ನಿರ್ದೇಶಕರಿಲ್ಲ
Last Updated 14 ನವೆಂಬರ್ 2019, 23:02 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ನಿರ್ದೇಶಕರ ನೇಮಕಾತಿ ಪ್ರಕಿಯೆಯು ನಾಟಕೀಯ ಸ್ವರೂಪ ಪಡೆದಿದ್ದು, ನಿರ್ದೇಶಕರ ನೇಮಕಾತಿ ಸಂಬಂಧ ಹೊರಡಿಸಿದ್ದ ಜಾಹೀರಾತನ್ನು ಈಗ ವಾಪಸು ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಂಸ್ಥೆಗೆ ಕಳೆದ ಒಂದು ವರ್ಷದಿಂದ ಪೂರ್ಣಾವಧಿ ನಿರ್ದೇಶಕರಿಲ್ಲ. ಡಾ.ಕೆ.‌ಎಸ್. ಸಂಜಯ್ ಪ್ರಭಾರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ ನ.2ಕ್ಕೆ ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಆದರೆ, ನ.8ಕ್ಕೆ ಇದನ್ನು ಹಿಂಪಡೆಯಲಾಗಿದ್ದು, ‘ಆಡಳಿತಾತ್ಮಕ ಕಾರಣ’ ನೀಡಲಾಗಿದೆ. ಆದರೆ, ಈ ಬಗ್ಗೆ ಕೆಲ ಹಿರಿಯ ವೈದ್ಯರು ಆಕ್ಷೇಪ ವ್ಯಕ್ತಪಡಿಸಿ, ಸಂಸ್ಥೆಯಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹೊಸ ಬೈಲಾ ರೂಪಿಸುವ ಉದ್ದೇಶದಿಂದ ಜಾಹೀರಾತನ್ನು ಹಿಂತೆಗೆದುಕೊಳ್ಳಲಾಗಿದೆ. ಹೊಸ ನಿಯಮ ಜಾರಿಗೆ ಬಂದ ಬಳಿಕ ಜಾಹೀರಾತನ್ನು ಮರು ಪ್ರಕಟ ಮಾಡಲಾಗುತ್ತದೆ. ಸದ್ಯದ ಬೈಲಾದ ಪ್ರಕಾರ ನಿರ್ದೇಶಕರ ನಿವೃತ್ತಿ ವಯೋಮಿತಿಯನ್ನು 62ಕ್ಕೆ
ನಿಗದಿಪಡಿಸಲಾಗಿದೆ. ಅದೇ ರೀತಿ, ನಿರ್ದೇಶಕ ಹುದ್ದೆಗೆ ದೇಶದ ಯಾವುದೇ ಭಾಗದ ವೈದ್ಯರು ಅರ್ಹರಾಗಿದ್ದಾರೆ.ಸಂಸ್ಥೆಯ ಆಡಳಿತ ಮಂಡಳಿ ಇತ್ತೀಚೆಗೆ ನಿವೃತ್ತಿ ವಯಸ್ಸನ್ನು 60ಕ್ಕೆ ಇಳಿಸಲು ನಿರ್ಧರಿಸಿದೆ’ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ. ಗಿರೀಶ್ ಅವರು ತಿಳಿಸಿದರು.

‘58 ವರ್ಷ ವಯೋಮಿತಿ ವರ್ಷದೊಳಗಿನ ವೈದ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಮಂಡಳಿ ಅವಕಾಶ ಮಾಡಿಕೊಟ್ಟಿತ್ತು. ಈ ವಯೋಮಿತಿಗಿಂತ ಅಧಿಕ ಇರುವವರು ನೇಮಕಾತಿಯಾದ ಒಂದೇ ವರ್ಷದಲ್ಲಿ ನಿವೃತ್ತಿ ಹೊಂದಬೇಕಾಗುತ್ತದೆ. ಹೊರಗಿನವರ ಬದಲು ಸಂಸ್ಥೆಯಲ್ಲಿರುವ ಅರ್ಹರಿಗೆ ನಿರ್ದೇಶಕ ಹುದ್ದೆ ಸಿಗಬೇಕು ಎಂಬ ಆಶಯ ಕೂಡಾ ಈ ನಿರ್ಣಯದ ಹಿಂದಿದೆ’ಎಂದರು.

ಆದರೆ, ಜಾಹೀರಾತು ನೀಡುವ ಮುನ್ನ ಏಕೆ ಈ ನಿರ್ಣಯ ತೆಗೆದುಕೊಂಡಿಲ್ಲ ಎಂದು ಕೆಲ ಹಿರಿಯ ವೈದ್ಯರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT