ಗುರುವಾರ , ಏಪ್ರಿಲ್ 2, 2020
19 °C
ಕೆಐಎಡಿಬಿ ಐಟಿ ಪಾರ್ಕ್‌ನಲ್ಲಿ ಶಿಲಾನ್ಯಾಸ *2020ರ ಅಂತ್ಯಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ

ಕೈಗಾರಿಕೆ ಉತ್ಪನ್ನಗಳ ಸಂಗ್ರಹಕ್ಕೆ ಉಗ್ರಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರೀಯ ಉಗ್ರಾಣ ನಿಗಮವು (ಸಿಡಬ್ಲ್ಯುಸಿ) ವಾಣಿಜ್ಯ ಮತ್ತು ಕೈಗಾರಿಕೆ ಉತ್ಪನ್ನಗಳ ಸಂಗ್ರಹ ಸಂಬಂಧ ದೇವನಹಳ್ಳಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಐಟಿ ಪಾರ್ಕ್‌ನಲ್ಲಿ ನಿರ್ಮಿಸುತ್ತಿರುವ ಉಗ್ರಾಣದ ಶಿಲಾನ್ಯಾಸ ಬುಧವಾರ ನೇರವೇರಿತು. 

ಶಿಲಾನ್ಯಾಸ ನೆರವೇರಿಸಿದ ನಿಗಮದ ಅಧ್ಯಕ್ಷ ಡಿ.ವಿ.ಪ್ರಸಾದ್, ‘14.20 ಎಕರೆಯಲ್ಲಿ ಉಗ್ರಾಣ ತಲೆಯೆತ್ತಲಿದೆ. ಮೊದಲ ಹಂತದಲ್ಲಿ 4.5 ಲಕ್ಷ ಚದರ ಅಡಿ ವಿಸ್ತೀರ್ಣ ಹಾಗೂ ಎರಡನೇ ಹಂತದಲ್ಲಿ 8 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಉಗ್ರಾಣವನ್ನು ನಿರ್ಮಾಣ ಮಾಡಲಾಗುತ್ತದೆ. ಇದು 20 ಮಹಡಿಗಳ ಕಟ್ಟಡವಾಗಿದ್ದು, 40 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಡೇಟಾ ವೇರ್‌ ಹೌಸಿಂಗ್‌ ಇರಲಿದೆ. ಇದಲ್ಲದೇ ಲಾಜಿಸ್ಟಿಕ್ ಮತ್ತು ವಾಣಿಜ್ಯ ಕಚೇರಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಈ ಉಗ್ರಾಣ ಆರಂಭಿಸುವ ವೇಳೆಗೆ ಸುಮಾರು 1 ಸಾವಿರ ಉದ್ಯೋಗಗಳು ಸೃಷ್ಟಿಯಾಗುತ್ತವೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು