ಶುಕ್ರವಾರ, ಏಪ್ರಿಲ್ 3, 2020
19 °C

ಅಂತರರಾಷ್ಟ್ರೀಯ ಮಹಿಳಾ ದಿನ: ಬಿಐಸಿಯಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಿಳೆ,ಸ್ವಾತಂತ್ರ್ಯ, ಸಮಾನತೆ ವಿಷಯಗಳ ನೆಲೆಯಲ್ಲಿ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸಲು ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ಸಜ್ಜಾಗಿದೆ.

ಲಿಂಗ ಸಮಾನತೆ, ಮಹಿಳಾ ಸ್ವಾತಂತ್ರ್ಯದ ಅದೇ ಹಳೇ ರಾಗ, ಹಳೇ ಹಾಡುಗಳ ಬದಲಿಗೆ, ಮಹಿಳಾ ಸಾಮರ್ಥ್ಯದ ಹೊಸ ಹೊಳಹುಗಳನ್ನು ಒಳಗೊಂಡ ಈ ಕಾರ್ಯಕ್ರಮವು ಮಾರ್ಚ್‌8ರ (ಭಾನುವಾರ) ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ನಡೆಯಲಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ. 

12ನೇ ಶತಮಾನದ ಮಹಿಳಾ ವಚನಗಾರ್ತಿಯರ ವಚನಗಳನ್ನು ಹಾಡುವ ಮೂಲಕ ಗಾಯಕಿ ಎಂ.ಡಿ. ಪಲ್ಲವಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ‘ಪುರುಷನೂ ಅಳುತ್ತಾನೆ’, ‘20ನೇ ಶತಮಾನದಲ್ಲಿ ಭಾರತದ ಮುಸ್ಲಿಂ ಮಹಿಳೆಯರು’, ‘ನಮ್ಮ ನಡೆ ಸಮಾನತೆ ಕಡೆಗೆ’ ವಿಷಯ ಕುರಿತಂತೆ ತಜ್ಞರು ಚರ್ಚೆ ನಡೆಸಲಿದ್ದಾರೆ. 

‘ಪುರುಷತ್ವ ವಿಷಯವೇ ಬಿಕ್ಕಟ್ಟಿನಲ್ಲಿದೆಯೇ’ ಕುರಿತ ಸಾಕ್ಷ್ಯಚಿತ್ರವಲ್ಲದೆ, ಮಹಿಳೆಯರ ಕುರಿತ ವಿಭಿನ್ನ ಕಥಾಹಂದರವುಳ್ಳ ವಿವಿಧ ಚಲನಚಿತ್ರ ಗಳ ಪ್ರದರ್ಶನವೂ ಇದೆ. ಕಾವ್ಯವಾಚನ ಮತ್ತು ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು