ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಜನ್ಮಾಷ್ಟಮಿ: ಈ ವರ್ಷ ಡಿಜಿಟಲ್ ಸಂಭ್ರಮಾಚರಣೆ

Last Updated 30 ಜುಲೈ 2020, 21:03 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಯ ಎರಡು ದಿನಗಳ ಎಲ್ಲಾ ಕಾರ್ಯಕ್ರಮಗಳನ್ನು ಭಕ್ತರಿಗೆ ಅನ್‌ಲೈನ್ ಮೂಲಕ ತಲುಪಿಸಲು ಇಸ್ಕಾನ್ ಮುಂದಾಗಿದೆ.

‘ಇಸ್ಕಾನ್ ಬೆಂಗಳೂರು ಯುಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಮ್, ಫೇಸ್‌ಬುಕ್‌ಗಳಲ್ಲೂ ‘ಸ್ವಾಗತಂ ಕೃಷ್ಣ ಲೈವ್’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುವುದು. ದೇಶದಲ್ಲಿ ಸಾಂಕ್ರಾಮಿಕ ರೋಗದ ವಾತಾವರಣ ಇರುವ ಕಾರಣ ಜಗತ್ತಿನಾದ್ಯಂತ ಇರುವ ಲಕ್ಷಾಂತರ ಭಕ್ತರಿಗೆ ಡಿಜಿಟಲ್ ಮೂಲಕವೇ ಸಂಭ್ರಮ ತಲುಪಿಸಲು ನಿರ್ಧರಿಸಲಾಗಿದೆ’ ಎಂದು ಇಸ್ಕಾನ್ ತಿಳಿಸಿದೆ.

ಮುಂಜಾನೆ ಶ್ರೀ ರಾಧಾಕೃಷ್ಣಚಂದ್ರಸ್ವಾಮಿ ನೌಕಾ ವಿಹಾರ(ತೆಪ್ಪೋತ್ಸವ), ಅಭಿಷೇಕ, ಪಂಚಗವ್ಯ, ಪಂಚಾಮೃತ, ಔಷಧೋಪಚಾರ, ಫಲರಸ, ಗಂಧೋದಕಾದಿ ಅಭಿಷೇಕ, ದೀಪೋತ್ಸವ, ಪುಷ್ಪವೃಷ್ಟಿ, ಚಾಮರ ಸೇವೆ ಹಾಗೂ ಉಯ್ಯಾಲೆ ಸೇವೆ ನೇರ ಪ್ರಸಾರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT