ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಜ ಧರ್ಮ, ಶೂದ್ರ ಧರ್ಮ ರೂಪಿಸುವುದು ಒಳಿತು: ಮೂಡ್ನಾಕೂಡು ಚಿನ್ನಸ್ವಾಮಿ

Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸನಾತನ ಧರ್ಮದ ಬಗ್ಗೆ ಚರ್ಚೆಯಾಗುತ್ತಿದೆ. ಸನಾತನ ಧರ್ಮದ ಅವಾಂತರಗಳು ವ್ಯಾಪಕ ಮತ್ತು ನಿರಂತರವಾಗಿದೆ. ಹಾಗಾಗಿ ಇಂದು ದ್ವಿಜ ಧರ್ಮ ಮತ್ತು ಶೂದ್ರ ಧರ್ಮ ಎಂದು ಎರಡು ಪ್ರತ್ಯೇಕ ಧರ್ಮಗಳನ್ನು ರೂಪಿಸುವುದು ಒಳಿತು’ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.

ರಂಗನಾಥ ಕಂಟನಕುಂಟೆ ಅವರ ‘ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ’ ಕವನ ಸಂಕಲನ, ‘ಓದಿನ ಒಕ್ಕಲು’ ವಿಮರ್ಶಾ ಲೇಖನಗಳ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಇಂದು ಧರ್ಮದ ಚರ್ಚೆಗಳು ದಿಕ್ಕು ತಪ್ಪಿವೆ. ಒಮ್ಮೊಮ್ಮೆ ಏನು ಮಾತನಾಡಬೇಕು ಎಂಬುದೇ ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.

ಲೇಖಕ ಕಾ.ತ. ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕರಾದ ಗಂಗರಾಜು ಜಿ. ಮತ್ತು ದೇವರಾಜು ಡಿ.ಆರ್‌. ಕೃತಿಗಳನ್ನು ಪರಿಚಯಿಸಿದರು. ಲೇಖಕ ರಂಗನಾಥ ಕಂಟನಕುಂಟೆ, ಪ್ರಾಧ್ಯಾಪಕ ರವಿಕುಮಾರ್‌ ಬಾಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT