ಯಲಹಂಕ: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಜಕ್ಕೂರು ಗ್ರಾಮದಲ್ಲಿ ಗ್ರಾಮೋತ್ಸವ ಸೇವಾ ಸಮಿತಿ ಆಶ್ರಯದಲ್ಲಿ ಸಫಲಮ್ಮ, ಮುನೇಶ್ವರಸ್ವಾಮಿ, ಮಹೇಶ್ವರಮ್ಮ ಮತ್ತು ಉಭಯ ಮಾರಮ್ಮ ದೇವರ 22ನೇ ವಾರ್ಷಿಕೋತ್ಸವ ಸಮಾರಂಭ 5 ದಿನ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ಮನೆಗಳಿಂದ ದೇವರಿಗೆ ತಣುಮುದ್ದೆ ಸಮರ್ಪಿಸಲಾಯಿತು. ವಿವಿಧ ಬಗೆಯ ಹೂವುಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಗಳಲ್ಲಿ ದೇವರ ವಿಗ್ರಹಗಳನ್ನು ಕೂರಿಸಿ, ಮಂಗಳವಾರ ಸಂಜೆ 4 ಗಂಟೆಗೆ ಜಕ್ಕೂರು ವೃತ್ತದಿಂದ ಆರಂಭವಾದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ರಾತ್ರಿ 10 ಗಂಟೆಗೆ ಕೊನೆಗೊಂಡಿತು.

ಭಕ್ತರು ಹಣ್ಣು, ಕಾಯಿ ಸಮರ್ಪಿಸಿ ದರ್ಶನ ಪಡೆದರು. ಮೆರವಣಿಗೆಯುದ್ದಕ್ಕೂ ತಮಟೆ, ಬ್ಯಾಂಡ್ ತಂಡ ಸೇರಿ ವಿವಿಧ ವಾದ್ಯವೃಂದಗಳ ಪ್ರದರ್ಶನ ಗಮನ ಸೆಳೆಯಿತು. ಬುಧವಾರ ಮಡಿಲಕ್ಕಿ ಕಟ್ಟುವ ಕಾರ್ಯನೆರವೇರಿಸಿ ದೇವರುಗಳನ್ನು ಬೀಳ್ಕೊಡುವ ಮೂಲಕ ವಾರ್ಷಿಕೋತ್ಸವಕ್ಕೆ ಸಂಭ್ರಮದ ತೆರೆಬಿದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.