ಭಾನುವಾರ, ಏಪ್ರಿಲ್ 5, 2020
19 °C

ರೈಲು, ಬಸ್‌ ನಿರೀಕ್ಷೆಯಲ್ಲಿ ಕಾದ ಪ್ರಯಾಣಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೈಲು ಮತ್ತು ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರೂ ಅಪ್ಪಿತಪ್ಪಿ ಬರಲಿವೆಯೇನೋ ಎಂದು ಕೆಲ ಪ್ರಯಾಣಿಕರು ಅಲ್ಲಲ್ಲಿ ಕಾದು ನಿಂತಿದ್ದರು. ತಿಪಟೂರು, ಅರಸೀಕೆರೆ ಕಡೆಗೆ ಹೋಗಬೇಕಿದ್ದ ಹತ್ತಕ್ಕೂ ಹೆಚ್ಚು ಮಂದಿ ತುಮಕೂರು ರಸ್ತೆಯ 8ನೇ ಮೈಲಿ, ಜಾಲಹಳ್ಳಿ ಕ್ರಾಸ್ ಬಳಿ ನಿಂತಿದ್ದರು.

‘ಮದುವೆಯೊಂದಕ್ಕೆ ರಾತ್ರಿ ಬಂದಿದ್ದೆವು. ಮರಳಿ ಊರಿಗೆ ಹೋಗಬೇಕಿದೆ. ಯಾವುದಾದರೂ ವಾಹನ ಬರಬಹುದು ಎಂಬ ನಿರೀಕ್ಷೆಯಲ್ಲಿ ನಾಲ್ಕೈದು ಗಂಟೆಗಳಿಂದ ಕಾಯುತ್ತಿದ್ದೇವೆ. ಬಸ್‌ಗಳಿರಲಿ, ಲಾರಿ, ಕಾರುಗಳೂ ಬರುತ್ತಿಲ್ಲ’ ಎಂದು ಅರಸೀಕೆರೆಯ ಶಿವರುದ್ರಪ್ಪ ಹೇಳಿದರು. ಯಶವಂತಪುರ ರೈಲು ನಿಲ್ದಾಣ ಬಾಗಿಲು ಮುಚ್ಚಿದ್ದರೂ ಮೆಟ್ಟಿಲುಗಳ ಮೇಲೆ 40 ಮಂದಿ ಕಾದು ಕುಳಿತಿದ್ದರು. ರೈಲ್ವೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ಬಳಿ ಕೆಲಸ ಮಾಡುವ ಕಾರ್ಮಿಕರು ಕೂಡ ಇದ್ದರು. ‘ಪಾಂಡವಪುರದಲ್ಲಿ ನಾಳೆಯಿಂದ ಕಾಮಗಾರಿ ಆರಂಭವಾಗುತ್ತಿದೆ. ಅಲ್ಲಿಗೆ ಹೋಗಲು ವಾಹನಗಳಿಲ್ಲ. ಮಕ್ಕಳು, ಮಹಿಳೆಯರ ಸಮೇತ ಇಲ್ಲೇ ಇದ್ದೇವೆ’ ಎಂದು ಶಬ್ಬೀರ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು