ಬೆಂಗಳೂರು: ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಶೀಘ್ರ ಹಾಗೂ ನಿಖರವಾಗಿ ಪರೀಕ್ಷಾ ವರದಿ ಒದಗಿಸಲು ರಕ್ತ ಪರೀಕ್ಷಾ ವಿಶ್ಲೇಷಕ ಯಂತ್ರವನ್ನು (ರೋಶ್ ಕೋಬಾಸ್ ಪ್ರೊ) ಅಳವಡಿಸಿಕೊಂಡಿದೆ.

‘ಸಂಸ್ಥೆಯಲ್ಲಿ ಪ್ರತಿನಿತ್ಯ 1,800ರಿಂದ 2,000 ಜನ ತಪಾಸಣೆಗೆ ಒಳಪಡುತ್ತಿದ್ದಾರೆ. ಸಂಸ್ಥೆಯ ಜೀವರಸಾಯನ ವಿಜ್ಞಾನ ವಿಭಾಗದಲ್ಲಿ ಈ ಯಂತ್ರ ಕಾರ್ಯನಿರ್ವಹಿಸಲಿದೆ. ರಕ್ತ ಪರೀಕ್ಷಾ ವರದಿಯನ್ನು ಆದಷ್ಟು ಶೀಘ್ರ ಒದಗಿಸಲು ಈ ಯಂತ್ರ ಸಹಕಾರಿಯಾಗಲಿದೆ. ಯಂತ್ರದ ಸಹಾಯದಿಂದ ಅನೇಕ ರಕ್ತದ ಮಾದರಿಗಳ ಪರೀಕ್ಷೆಯನ್ನು ಏಕಕಾಲದಲ್ಲಿ ನಡೆಸಬಹುದಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ತಿಳಿಸಿದ್ದಾರೆ.

‘ಪ್ರಯೋಗಾಲಯದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಈ ಯಂತ್ರ ಸಹಕಾರಿಯಾಗಲಿದೆ. ಪರೀಕ್ಷಾ ವರದಿ ಶೀಘ್ರ ವೈದ್ಯರ ಕೈಸೇರಿದಲ್ಲಿ ಆದಷ್ಟು ಬೇಗ ತುರ್ತು ಚಿಕಿತ್ಸೆ ಒದಗಿಸಿ, ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.