ಗುರುವಾರ , ಅಕ್ಟೋಬರ್ 22, 2020
28 °C

ಜೆಇಇ ಅಡ್ವಾನ್ಸ್‌: ತಪಸ್‌ನ 14 ವಿದ್ಯಾರ್ಥಿಗಳು ಉತ್ತೀರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಅಂಗ ಸಂಸ್ಥೆಯಾದ ತಪಸ್‍ನ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಐಐಟಿಗೆ ಪ್ರವೇಶಾವಕಾಶ ಪಡೆದಿದ್ದಾರೆ.

ಆರ್ಥಿಕವಾಗಿ ಅತಿ ಹಿಂದುಳಿದ ಪರಿವಾರಗಳಿಂದ, ಸೆಕ್ಯುರಿಟಿ, ಹೌಸ್ ಕೀಪಿಂಗ್, ಗಾರ್ಮೆಂಟ್ಸ್, ರೈತ ಕೂಲಿಕಾರರ ಕುಟುಂಬಗಳಿಂದ ಬಂದಂತಹ ಮಕ್ಕಳು ಈ ಸಾಧನೆ ಮಾಡಿದ್ದಾರೆ. ಈ ವರ್ಷ ಒಟ್ಟು 32 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತೀರ್ಣರಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು.

ಸೆಕ್ಯುರಿಟಿ ಗಾರ್ಡ್ ಪುತ್ರ ಪೃಥ್ವಿರಾಜ್ 70ನೇ ರ‍್ಯಾಂಕ್, ಮನೆಗೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದ ನವೀನ್ ಗೌಡ 745ನೇ ರ‍್ಯಾಂಕ್‌, ತಿಪಟೂರಿನ ಬಳೆ ವ್ಯಾಪಾರ ಮಾಡುತ್ತಿದ್ದ ಕುಟುಂಬದ ಸಾತ್ವಿಕ್ 875ನೇ ರ‍್ಯಾಂಕ್, ಬೆಳಗಾವಿಯ ರೈತ ಕುಟುಂಬದ ಸಂಗ್ರಾಮ್ ಸಿಂಗ್ ಪಾಟೀಲ 1015ನೇ ರ‍್ಯಾಂಕ್‌, ಬಸ್ ಕಂಡಕ್ಟರ್ ಪುತ್ರ ಭವನ್ 1502ನೇ ರ‍್ಯಾಂಕ್‌, ಕಾಯಿಮಂಡಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದ ರಾಹುಲ್ ಟಿ.ಜಿ. 1842ನೇ ರ‍್ಯಾಂಕ್‌, ನೀಲಕಂಠ ಚವ್ಹಾಣ್ 1217ನೇ ರ‍್ಯಾಂಕ್‌ ಪಡೆದಿದ್ದಾರೆ.

ಉಳಿದ ರ‍್ಯಾಂಕ್‌ ವಿಜೇತರು: ಯಲ್ಲಾಪುರದ ಆದಿತ್ಯ ರಾಮ ಹೆಗಡೆ (2375), ಅರಸೀಕೆರೆಯ ಉಲ್ಲಾಸ್‌ (2468), ಬೆಂಗಳೂರಿನ ಕೆ.ಚೇತನ್‌ ಕುಮಾರ್‌ (2664), ಬೈಲಹೊಂಗಲದ  ಆಶಿಸ್ ಅರಕುಣಿ (3649), ತುಮಕೂರಿನ ವಿವೇಕ್ (7586), ಬೆಂಗಳೂರಿನ ಶಶಾಂಕ್‌ (9142), ಬಾದಾಮಿಯ ಬಾಳಪ್ಪ ಭಜಂತ್ರಿ (2659)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು