ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿರುವ ಜೈವಿಕ ವನವನ್ನು ಪಾರಂಪರಿಕ ತಾಣವನ್ನಾಗಿ ಮಾಡಲು ಅರಣ್ಯ ಸಚಿವರು ಮುಂದಾಗಿರುವ ಸಂದರ್ಭದಲ್ಲೇ, ಈ ಪ್ರದೇಶದಲ್ಲಿ 419 ಮರಗಳನ್ನು ಕಡಿಯಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಪಿ.ಎಂ–ಉಷಾ ಯೋಜನೆಯಡಿ ಶೈಕ್ಷಣಿಕ ಬ್ಲಾಕ್ ಮತ್ತು ಸಂಶೋಧನಾ ಬ್ಲಾಕ್ ನಿರ್ಮಿಸಲು ₹100 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು ಇದಕ್ಕಾಗಿ, ಸರ್ವೆ ನಂ. 6ರಲ್ಲಿರುವ 419 ಮರಗಳನ್ನು ತೆರವುಗೊಳಿಸಲು ನಿರ್ಧರಿಸಿಲಾಗಿದೆ. ಈ ಬಗ್ಗೆ ಮನವಿ ಸ್ವೀಕರಿಸಿರುವ ಬಿಬಿಎಂಪಿ, ಜೂನ್ 20ರಂದು ಪ್ರಕಟಣೆ ಹೊರಡಿಸಿದ್ದು, ಮರಗಳನ್ನು ಕಡಿಯಲು ಅನುಮತಿ ನೀಡುವ ಮುನ್ನ ಆಕ್ಷೇಪಣೆಗೆ 10 ದಿನಗಳ ಅವಕಾಶ ನೀಡಿದೆ.

‘ಜ್ಞಾನಭಾರತಿ ಆವರಣದಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಾರದು. ಜೈವಿಕ ವನವನ್ನು ಉಳಿಸಿ, ಉಳಿದಿರುವ ಎಲ್ಲ ಪ್ರದೇಶವನ್ನು ‘ಪಾರಂಪರಿಕ ತಾಣ’ವನ್ನಾಗಿಸಬೇಕು’ ಎಂದು ಜ್ಞಾನಭಾರತಿ ವಾಯುವಿಹಾರಿಗಳ ಸಂಘದ ಸದಸ್ಯರು ರಾಜ್ಯಪಾಲರಿಗೂ ಮನವಿ ಮಾಡಿದ್ದಾರೆ. ಅಲ್ಲದೆ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಪಾರಂಪರಿಕ ತಾಣವನ್ನಾಗಿ ಘೋಷಿಸುವ ಬಗ್ಗೆ ಕಡತ ಮಂಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಪಾರಂಪರಿಕ ತಾಣವಾಗುವ ಹಂತದಲ್ಲಿರುವ ಜ್ಞಾನಭಾರತಿಯಲ್ಲಿ ಈಗ ನೂರಾರು ಮರಗಳನ್ನು ಕಡಿಯಲು ಹೊರಟಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ನೂರಾರು ವರ್ಷಗಳಿಂದ ಬೆಳೆದಿರುವ ಮರಗಳನ್ನು ತೆರವುಗೊಳಿಸುವುದು ಸರಿಯಲ್ಲ. ವೃಷಭಾವತಿ ನದಿಯ ಕಾಲುವೆಯೂ ಇಲ್ಲಿದೆ. ಇಂತಹ ಪರಿಸರ ನಾಶಕ್ಕೆ ಅವಕಾಶ ನೀಡಬಾರದು. ಈಗಾಗಲೇ ಕೆಲವು ಅಪರೂಪದ ಪುಷ್ಪಗಳ ಗಿಡಗಳನ್ನು ತೆರವುಮಾಡಿದ್ದಾರೆ’ ಎಂದು ಜ್ಞಾನಭಾರತಿ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಟಿ.ಜೆ. ರೇಣುಕಾಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

ಮರಗಳನ್ನು ತೆರವುಗೊಳಿಸುವ ಸಂಬಂಧ ಹಲವು ಆಕ್ಷೇಪಣೆಗಳು ಬಂದಿದ್ದು, ವೈಜ್ಞಾನಿಕ ವರದಿಯೊಂದಿಗೆ ಪ್ರತಿಕ್ರಿಯಿಸಲಿದ್ದೇವೆ.
– ಎಸ್.ಎಂ. ಜಯಕರ,ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ

‘ಮರಗಳನ್ನು ಕಡಿದೇ ಅಭಿವೃದ್ಧಿ ಮಾಡುತ್ತೇವೆ ಎಂಬ ಅಧಿಕಾರಿಗಳ ಮನೋಭಾವ ಸರಿಯಲ್ಲ. ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಮರಗಳನ್ನು ಕಡಿಯುವುದರಿಂದ ಪರಿಸರ ನಾಶ ಮಾಡಿದಂತಾಗುತ್ತದೆ’ ಎಂದು ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್ ಹೇಳಿದರು.

‘419 ಮರಗಳನ್ನು ಕಡಿಯಲು ಉದ್ದೇಶಿಸಿರುವ ಸರ್ವೆ ನಂ.6ರ ಪ್ರದೇಶದಲ್ಲಿ ಜೈವಿಕ ವನ ನಿರ್ಮಿಸಲಾಗಿದ್ದು, ‘ಸಹ್ಯಾದ್ರಿ ವನ’ ಎಂದು ಹೆಸರಿಡಲಾಗಿದೆ. ಇಲ್ಲಿ ಪಾರಂಪರಿಕ ಮರಗಳಿದ್ದು, ಅವುಗಳನ್ನು ಉಳಿಸಬೇಕು’ ಎಂದು ಪರಿಸರ ಕಾರ್ಯಕರ್ತರು ಆಗ್ರಹಿಸಿದರು.

ಆರು ಲಕ್ಷ ಸಸಿ ನೆಟ್ಟಿದ್ದೇವೆ: ವಿಶ್ವವಿದ್ಯಾ ಲಯ ಜ್ಞಾನಭಾರತಿಯ ಆವರಣದಲ್ಲಿ ಆರು ಲಕ್ಷ ಸಸಿಗಳನ್ನು ನೆಟ್ಟಿದ್ದು, ಜೈವಿಕ–ವನವನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಸ್.ಎಂ. ಜಯಕರ ಮಾಹಿತಿ ನೀಡಿದರು.

ಯಾವ ಮರಗಳಿಗೆ ಕತ್ತರಿ?

ಅಶೋಕ ಮರ ಬಾಗೆಮರ ತಾರೆಮರ ಮತ್ತಿ ತುಪರೆಮರ ಹೊನ್ನೆ ಕಕ್ಕೆ ಬನ್ನಿ ಹುಣಸೆ ಕಮರ ಬಸವನಪಾದ ಬೇಲದಮರ ಬೀಟೆಮರ

‘ಬಫರ್ ಝೋನ್ನಲ್ಲಿ ಅಂಬೇಡ್ಕರ್ ಥೀಮ್ ಪಾರ್ಕ್’

‘ಜ್ಞಾನಭಾರತಿ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ‘ಅಂಬೇಡ್ಕರ್ ಥೀಮ್ ಪಾರ್ಕ್’ ನಿರ್ಮಿಸಲು ಗುರುತಿಸಿರುವ ಜಾಗ ವೃಷಭಾವತಿ ನದಿಯ ಬಫರ್ ಝೋನ್ನಲ್ಲಿದ್ದು ಜೈವಿಕ ವನ–1ರ ಭಾಗವಾಗಿದೆ’ ಎಂದು ಜ್ಞಾನಭಾರತಿ ವಾಯುವಿಹಾರಿಗಳ ಸಂಘದ ಸದಸ್ಯರು ಹೇಳಿದರು.

‘ಥೀಮ್ ಪಾರ್ಕ್ಗೆ ಗುರುತಿಸಿರುವ 25 ಎಕರೆ ಪ್ರದೇಶದಲ್ಲಿ ವೃಷಭಾವತಿ ನದಿಯ ಹರಿವಿದ್ದು ಒಂದು ದೊಡ್ಡ ಚೆಕ್ ಡ್ಯಾಂ ಕಟ್ಟಲಾಗಿದೆ. ಚಿಟ್ಟೆಗಳು ಇರುವ ಪ್ರದೇಶವೂ ಆಗಿದೆ. ಈಗಾಗಲೇ ಅಂಬೇಡ್ಕರ್ ಅಧ್ಯಯನ ಕೇಂದ್ರ ಒಂದು ಸುಂದರ ತೋಟದಲ್ಲಿ ಅರಳಿ ನಿಂತಿದೆ. ಅಲ್ಲಿಯೇ ಗ್ರಂಥಾಲಯ ಆಡಿಟೋರಿಯಂ ಇದೆ. ಹೀಗಾಗಿ ಮತ್ತೆ ಥೀಂ ಪಾರ್ಕ್ಗಾಗಿ ಸಾವಿರಾರು ಮರಗಳನ್ನು ಕಡಿಯುವುದು ಬೇಡ. ನದಿಯ ಬಫರ್ ಝೋನ್ ಉಳಿಯಬೇಕು’ ಎಂದು ಸಂಘದ ಅಧ್ಯಕ್ಷ ಪ್ರೊ. ಟಿ.ಜೆ.ರೇಣುಕಾ ಪ್ರಸಾದ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.