ಶುಕ್ರವಾರ, ಜನವರಿ 21, 2022
29 °C

ಉದ್ಯೋಗ ಸೃಷ್ಟಿ: ಸರ್ಕಾರದ್ದಷ್ಟೇ ಹೊಣೆಯಲ್ಲ: ಸಚಿವ ಎ. ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಗೇರಿ: ‘ಉದ್ಯೋಗ ಸೃಷ್ಟಿ ವಿಷಯದಲ್ಲಿ ಸರ್ಕಾರ ಮಾತ್ರ ಜವಾಬ್ದಾರಿ ವಹಿಸಬೇಕು ಎಂದು ಬಯಸುವುದು ಸಲ್ಲದು. ಯುವಕರು ಸಹ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು. ಆಗ ಮಾತ್ರ ನಿರುದ್ಯೋಗ ಸಮಸ್ಯೆಗೆ ಇತಿಶ್ರೀ ಹಾಡಬಹುದು’ ಎಂದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲದಲ್ಲಿ ಗುರುವಾರ ಆಯೋಜಿಸಲಾಗಿದ್ದ 7 ಮತ್ತು 8ನೇ ವರ್ಷದ ಘಟಿಕೋತ್ಸವ ಕಾರ್ಯಕ್ರಮದಲ್ಲಿ 116 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಪದವಿ ಎನ್ನುವುದು ಉದ್ಯೋಗ ಖಾತ್ರಿಯ ಪ್ರಮಾಣ ಪತ್ರವಲ್ಲ. ಕಾಲಘಟ್ಟಕ್ಕೆ ಪೂರಕವಾಗಿ ಕೌಶಲ ಬೆಳೆಸಿಕೊಳ್ಳಬೇಕು’  ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ದೇಶದಲ್ಲಿ ದಲಿತರ ಸ್ಥಿತಿ ಇಂದಿಗೂ ಶೋಚನೀಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಿಕ್ಷಣವು ಜ್ಞಾನಾರ್ಜನೆಗೆ ಮೀಸಲಾಗಬಾರದು. ಸಾಮಾಜಿಕ ಕಳಕಳಿ, ನೈತಿಕತೆ ಹಾಗೂ ಮೌಲ್ಯಗಳನ್ನು ಜಾಗೃತಗೊಳಿಸಬೇಕು’ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಹೇಳಿದರು.

ಪಿವಿಪಿ ಕಾಯದರ್ಶಿ ಕೃಷ್ಣಮೂರ್ತಿ, ಟ್ರಸ್ಟಿಗಳಾದ ಎಸ್.ಮರಿಸ್ವಾಮಿ, ಬಿ.ಎನ್.ಉಮೇಶ್, ಪಿ.ಎಲ್ ನಂಜುಂಡಸ್ವಾಮಿ, ಎಸ್.ಶಿವಮಲ್ಲು, ಡಾ.ಎಂ.ಮಹದೇವ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.