ಬೆಂಗಳೂರು: ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಅವರ ಆಸ್ತಿ 18 ತಿಂಗಳಲ್ಲಿ ₹ 22 ಕೋಟಿಯಷ್ಟು ಹೆಚ್ಚಳವಾಗಿದೆ.

2018ರಲ್ಲಿ ಅವರ ಒಟ್ಟು ಆಸ್ತಿ 90.58 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಸೋಮವಾರ ಅವರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮ್ಮ ಮತ್ತು ಪತ್ನಿಯ ಒಟ್ಟು ಆಸ್ತಿಯ ಮೌಲ್ಯ ₹ 112.90 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ₹ 15.58 ಕೋಟಿ ಸಾಲವೂ ಇದೆ.

ಬೈರತಿ ಬಳಿ ₹34.36 ಕೋಟಿ ಮೌಲ್ಯದ ಚರಾಸ್ತಿ ಇದ್ದರೆ, ಅವರ ಪತ್ನಿಯ ಬಳಿ ₹ 56.57 ಲಕ್ಷದ
ಚರಾಸ್ತಿ ಇದೆ. ಇದರಲ್ಲಿ ಬೈರತಿ ಬಳಿ ದುಬಾರಿ 4 ರೋಲೆಕ್ಸ್ ವಾಚ್‌ಗಳು, 3 ರ‍್ಯಾಡೊ ವಾಚ್‌ಗಳು, 3 ಬೆಂಜ್ ಕಾರುಗಳು, 1 ಔಡಿಕಾರು, ಪತ್ನಿಯ ಬಳಿ 1 ಫಾರ್ಚುನರ್ ಕಾರು, 1 ಇನ್ನೋವಾ ಕಾರುಗಳು ಸೇರಿವೆ. ₹ 59.08 ಕೋಟಿಯ ಸ್ಥಿರಾಸ್ತಿ ಬೈರತಿ ಬಳಿ ಇದ್ದರೆ, ₹ 18.94 ಕೋಟಿ ಸ್ಥಿರಾಸ್ತಿ ಅವರ ಪತ್ನಿಯ ಬಳಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.