ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಗೊಳ್ಳದ 260 ಯೋಜನೆ ಸ್ಪಷ್ಟೀಕರಣ ಕೇಳಿದ ರೇರಾ

Last Updated 27 ಆಗಸ್ಟ್ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: ‌ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲು ವಿಫಲವಾಗಿರುವ 260 ಬಿಲ್ಡರ್‌ಗಳು, ಹೆಚ್ಚುವರಿ ಕಾಲಾವಕಾಶ ಕೋರಿ ಕರ್ನಾಟಕ ರಿಯಲ್‌ ಎಸ್ಟೇಟ್‌ ಪ್ರಾಧಿಕಾರಕ್ಕೆ (ಕೆ–ರೇರಾ) ಮನವಿ ಸಲ್ಲಿಸಿದ್ದಾರೆ.

ಇದರಲ್ಲಿ ಕೆಲವು ಯೋಜನೆಗಳಿಗೆ ಈಗಾಗಲೇ ಅನುಮತಿಯನ್ನು ರೇರಾ ನೀಡಿದ್ದು, ಉಳಿದ ಯೋಜನೆಗಳು ವಿಳಂಬವಾಗಲು ಕಾರಣ ಏನು ಎಂಬುದರ ಬಗ್ಗೆ ಸ್ಪಷ್ಟೀಕರಣ ಕೇಳಿದೆ.

‘ಅವಧಿ ವಿಸ್ತರಣೆ ಕೋರಿ 260 ಅರ್ಜಿಗಳು ಬಂದಿವೆ. ನಿಖರ ಕಾರಣ ನೀಡಿದ 17 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. 90 ಯೋಜನೆಗಳು ಅಂತಿಮ ಹಂತದಲ್ಲಿದ್ದು, ಕೋರಿರುವಷ್ಟು ಅವಧಿ ವಿಸ್ತರಣೆ ಮಾಡುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಉಳಿದ 170 ಯೋಜನೆಗಳನ್ನು ಅಪೂರ್ಣ ಎಂದು ಪರಿಗಣಿಸಲಾಗಿದೆ’ ಎಂದು ರೇರಾ ಅಧ್ಯಕ್ಷ ಎಂ.ಆರ್. ಕಾಂಬ್ಳೆ ತಿಳಿಸಿದರು.

‘ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಏಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ವಿವರಣೆಯನ್ನು ಕೇಳಿದ್ದೇವೆ. ಸ್ಪಷ್ಟೀಕರಣ ಬಂದ ಬಳಿಕ ಪ್ರತಿಯೊಂದು ಯೋಜನೆಯ ಪ್ರಗತಿ ಬಗ್ಗೆಯೂ ಕೂಲಂಕಷ ಪರಿಶೀಲನೆ ನಡೆಸಲಾಗುವುದು’ ಎಂದು ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT