ಭಾನುವಾರ, ನವೆಂಬರ್ 1, 2020
19 °C
ಕಾಡುಗೋಡಿ ಪೊಲೀಸರಿಂದ ಸೈನಿಕ ಬಂಧನ

‘ತಂಗಿ ಆತ್ಮಹತ್ಯೆಗೆ ಕಾರಣವೆಂದು ಬಾವವನ್ನೇ ಕೊಂದ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲೆ–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕಾಡುಗೋಡಿ ವೀರಸ್ವಾಮಿ ಲೇಔಟ್‌ನಲ್ಲಿ ರಾಜೇಶ್ (35) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಜಾನ್‌ಪಾಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಸೈನಿಕನಾದ ಆರೋಪಿ ಜಾನ್‌ಪಾಲ್, ಭಾನುವಾರ ಬೆಳಿಗ್ಗೆ 11.30ರ ಸುಮಾರಿಗೆ ಸ್ನೇಹಿತನ ಜೊತೆ ರಾಜೇಶ್ ಮನೆಗೆ ಬಂದು ಕತ್ತು ಕೊಯ್ದು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವವಾಗಿ ರಾಜೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸದ್ಯ ಜಾನ್‌ಪಾಲ್‌ ಅವರನ್ನು ಬಂಧಿಸಲಾಗಿದ್ದು, ಸ್ನೇಹಿತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೆಜಿಎಫ್‌ನ ರಾಜೇಶ್, ಎಚ್‌ಎಎಲ್ ಉದ್ಯೋಗಿ. ಏಳು ವರ್ಷಗಳ ಹಿಂದೆ ಜಾನ್‌ಪಾಲ್‌ ಅವರ ತಂಗಿ ಜಾಸ್ಮಿನ್ ಅವರನ್ನು ರಾಜೇಶ್ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಜಾಸ್ಮಿನ್ ಇತ್ತೀಚೆಗೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.’

‘ಪತಿ ರಾಜೇಶ್ ಕಿರುಕುಳದಿಂದ ಜಾಸ್ಮಿನ್ ಮೃತಪಟ್ಟಿರುವುದಾಗಿ ಠಾಣೆಗೆ ಪೋಷಕರು ದೂರು ನೀಡಿದ್ದರು. ಇತ್ತೀಚೆಗೆ ರಜೆ ಮೇಲೆ ಊರಿಗೆ ಬಂದಿದ್ದ ಜಾನ್‌ಪಾಲ್, ತಮ್ಮ ತಂಗಿ ಆತ್ಮಹತ್ಯೆಗೆ ರಾಜೇಶ್ ಕಾರಣವೆಂದು ತಿಳಿದು ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು