ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ನೌಕರಿ ಕೊಡುವಾಗ ಗುರುಗಳ ಮೇಲೆ ಆಣೆ ಮಾಡಿಸಿ’

Last Updated 15 ನವೆಂಬರ್ 2019, 14:31 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾರನ್ನಾದರೂ ಸರ್ಕಾರಿ ನೌಕರಿಗೆ ತೆಗೆದುಕೊಳ್ಳುವಾಗ ಅವರವರ ದೇವರು ಮತ್ತು ಗುರುಗಳ ಮೇಲೆ ಆಣೆ–ಪ್ರಮಾಣ ಮಾಡಿಸಿಕೊಳ್ಳುವುದು ಒಳ್ಳೆಯದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ, ಕಾಗಿನೆಲೆ ಮಹಾಸಂಸ್ಥಾನ ತಿಂತಿಣಿ ಶಾಖಾಮಠದ ಸಿದ್ಧರಾಮಾನಂದ ಸ್ವಾಮೀಜಿ ಸಲಹೆ ನೀಡಿದರು.

ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಆಡಳಿತ ಎನ್ನುವುದು ಈಗ ನೀಚ ವ್ಯವಸ್ಥೆಯಾಗಿದೆ. ಯಾವುದೇ ಕಚೇರಿಯಲ್ಲಿ ಪಾರದರ್ಶಕತೆ ಇಲ್ಲ. ಜವಾನನಿಂದ ಹಿಡಿದು ಮುಖ್ಯಕಾರ್ಯದರ್ಶಿವರೆಗಿನ ಹುದ್ದೆಗಳವರೆಗೆ ನೌಕರರು ಪ್ರಮಾಣ ಮಾಡುವಂತಾಗಬೇಕು. ಅವರು ಆರಾಧಿಸುವ ಗುರುಗಳ ಹೆಸರಲ್ಲಿ, ನಾನು ಪ್ರಾಮಾಣಿಕವಾಗಿ ಆಡಳಿತ ನಡೆಸುತ್ತೇನೆ ಎಂದು ನೌಕರರು ಪ್ರಮಾಣ ಮಾಡುವಂತಾದರೆ ಜನರು ಪಾರದರ್ಶಕ, ಸ್ವಚ್ಛ ಆಡಳಿತ ನೋಡಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT