ಭಾನುವಾರ, ಜನವರಿ 24, 2021
18 °C

‘ಬಿಎಂಶ್ರೀ ಪ್ರತಿಮೆಯ ದೋಷ ಸರಿಪಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಸವನಗುಡಿ ನ್ಯಾಷನಲ್ ಕಾಲೇಜು ವೃತ್ತದಲ್ಲಿರುವ ಬಿ.ಎಂ.ಶ್ರೀ ಪ್ರತಿಮೆಗೆ ಬಣ್ಣ ಹಚ್ಚಿ, ಪ್ರತಿಮೆ ಸ್ಥಾಪಿಸಿದವರ ಮೂಲ ಹೆಸರುಗಳ ತೆಗೆದು, ತಮ್ಮ ಹೆಸರು ಹಾಕಿಸಿಕೊಂಡಿರುವ ಶಾಸಕ ಉದಯ್ ಬಿ.ಗರುಡಾಚಾರ್ ಅವರ ನಡೆ ಇತಿಹಾಸಕ್ಕೇ ಅಪಚಾರ’ ಎಂದು ಕನ್ನಡ ಗೆಳೆಯರ ಬಳಗ ಖಂಡಿಸಿದೆ.

ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ, ‘ಬಿಎಂಶ್ರೀ ಪ್ರತಿಮೆ ಜಾಗ ಸ್ವಚ್ಛಗೊಳಿಸಿ, ಬಯಲು ರಂಗಮಂದಿರ ನಿರ್ಮಿಸುವಂತೆ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಉದಯ್ ಗರುಡಾಚಾರ್ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಮಾಡಲಾಗಿತ್ತು. ಅದರಂತೆ ಕೆಲವೇ ದಿನಗಳಲ್ಲಿ ಪ್ರತಿಮೆಗೆ  ಸುಂದರ ಮಂಟಪ ನಿರ್ಮಾಣಗೊಂಡು ಉದ್ಘಾಟನೆಯೂ ಆಗಿದೆ. ಇದಕ್ಕಾಗಿ ವಂದನೆಗಳು. ಆದರೆ, ಮೂಲ ಕಂಚಿನ ಪ್ರತಿಮೆಗೆ ಬಣ್ಣ ಬದಲಿಸುವ ಮೂಲಕ ಅದರ ನೈಜ ಸೌಂದರ್ಯಕ್ಕೆ ಧಕ್ಕೆ ತರಲಾಗಿದ್ದು, ಮೂಲ ಪ್ರತಿಮೆ ಸ್ಥಾಪಿಸಿದವರ ವಿವರಗಳು ಕಾಣದಂತೆ ಬಣ್ಣ ಹಚ್ಚಿರುವುದು ಖಂಡನೀಯ’ ಎಂದು  ದೂರಿದ್ದಾರೆ.

‘ಪ್ರತಿಮೆ ನವೀಕರಣ ಮತ್ತು ಉದ್ಯಾನ‌ದ ಅಭಿವೃದ್ಧಿ ಎಂದು ಹೊಸ ಕಲ್ಲು ಕೆತ್ತಿಸಿ, ಪುತ್ಥಳಿಯ ಪೀಠದಲ್ಲಿ ಉದಯ್ ಗರುಡಾಚಾರ್ ಮತ್ತು ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರ ಹೆಸರುಗಳನ್ನು ಹಾಕಿಸಿಕೊಂಡಿರುವುದು ಸರಿಯಲ್ಲ. ಈ ಹಿಂದಿನಂತೆಯೇ ವಿವರಗಳಿದ್ದ ಕಲ್ಲುಗಳನ್ನು ಸರಿಪಡಿಸಬೇಕು. 15 ದಿನಗಳಲ್ಲಿ ಇದನ್ನು ಸರಿಪಡಿಸದಿದ್ದರೆ, ಕನ್ನಡಪರ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು’ ಎಂದೂ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು