ಗುರುವಾರ , ನವೆಂಬರ್ 21, 2019
26 °C
ಚಿಕ್ಕಸಂದ್ರದಲ್ಲಿ ಕನ್ನಡ ಹಬ್ಬ

ದಾಸರಹಳ್ಳಿ ಕ್ಷೇತ್ರದ ₹ 800 ಕೋಟಿಯಷ್ಟು ಅನುದಾನ ನೀಡಲಾಗಿತ್ತು: ಎಚ್‌ಡಿಕೆ

Published:
Updated:
Prajavani

ಪೀಣ್ಯದಾಸರಹಳ್ಳಿ: 'ಮೈತ್ರಿ ಸರ್ಕಾರದಲ್ಲಿ ದಾಸರಹಳ್ಳಿ ಕ್ಷೇತ್ರದ ಮೂಲಸೌಕರ್ಯಕ್ಕೆ ₹800 ಕೋಟಿಯಷ್ಟು ಅನುದಾನ ನೀಡಲಾಗಿತ್ತು. ಆದರೆ, ಈಗಿನ ಸರ್ಕಾರ ದ್ವೇಷ ರಾಜಕಾರಣ ಮಾಡದೇ ಅನುದಾನ ನೀಡಬೇಕು' ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಚಿಕ್ಕಸಂದ್ರದಲ್ಲಿ ಕೇಸರಿನಂದನ ಕರುನಾಡು ಸೇನೆ ವತಿಯಿಂದ ಆಯೋಜಿಸಿದ್ದ 2ನೇ ವರ್ಷದ ಕನ್ನಡ ಹಬ್ಬ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

’ನಾನು ಕಾಂಗ್ರೆಸ್ ಬೆಂಬಲಿತ ಸಿಎಂ ಆಗಿದ್ದೆ. ಆಗ ಇನ್ನೊಬ್ಬರ ಹಂಗಿನಲ್ಲಿ ಕೆಲಸ ಮಾಡಬೇಕಿತ್ತು. ರೈತರ ಸಾಲ ಮನ್ನಾ ಮಾಡಲು ಅವಮಾನ ಸಹಿಸಿಕೊಂಡೆ. ಈಗ ನೀವು ಪಾವತಿಸುತ್ತಿರುವ ತೆರಿಗೆ ಲೂಟಿಯಾಗುತ್ತಿದೆ‘ ಎಂದು ಹೇಳಿದ ಅವರು, ’ನೆಲ, ಜಲ, ಭಾಷೆ ಬಗ್ಗೆ ಚರ್ಚೆ ಮಾಡಬೇಕು. ಆದರೆ, ಒಂದು ಕಡೆ ಪ್ರವಾಹ, ಬೆಳೆ ನಾಶವಾಗಿದೆ. ಅಲ್ಲಿನ ಜನರ ಕಷ್ಟ ಅರಿತಿದ್ದೇನೆ. ಅವರಿಗೆ ಹೊಸ ಬದುಕು ಕಟ್ಟಿಕೊಡಿ ಎಂದು ಹೇಳುತ್ತಿದ್ದೇನೆ. ಇದನ್ನು ಮಾಧ್ಯಮದವರು ಬೇರೆ ಪಕ್ಷದವರ ಜೊತೆ ಕೈ ಜೋಡಿಸುತ್ತಿದ್ದೇನೆ ಎಂದುಕೊಂಡಿರಬೇಕು' ಎಂದರು.

ಶಾಸಕ ಆರ್.ಮಂಜುನಾಥ್ 'ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಇಲ್ಲಿಯ ಜನರು ಕನ್ನಡ ಬಂದರೂ ಮಾತನಾಡುವುದಿಲ್ಲ. ಕನ್ನಡ ಮಾತನಾಡಬೇಕು. ವರ್ಷದ ಪ್ರತಿದಿನ ಕನ್ನಡ ಕಾರ್ಯಕ್ರಮ ನಡೆಯುತ್ತಿರಬೇಕು' ಎಂದರು.

ಪ್ರತಿಕ್ರಿಯಿಸಿ (+)