ಭಾನುವಾರ, ಜೂನ್ 26, 2022
25 °C
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜಿಸಲು ಆಗ್ರಹ

ಹೆಡಗೇವಾರ್ ಸ್ವಾತಂತ್ರ್ಯ ಹೋರಾಟ ಮಾಡಿದ್ದಕ್ಕೆ ದಾಖಲೆ ಇಲ್ಲ: ಬಿ.ಕೆ. ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೇಶವ ಬಲಿರಾಮ್ ಹೆಡಗೇವಾರ್ ಸೇರಿದಂತೆ ಆರೆಸ್ಸೆಸ್‌ನ ಯಾರೊಬ್ಬರೂ ಸ್ವಾತಂತ್ರ್ಯ ಹೋರಾಟ ದಲ್ಲಿ ಭಾಗವಹಿಸಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಬಗ್ಗೆ ಆರೆಸ್ಸೆಸ್‌ನ ದಾಖಲೆಗಳಲ್ಲಿಯೂ ಇಲ್ಲ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಚಂದ್ರಶೇಖರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ ದೆಹಲಿಯ ಕೆಂಪು ಕೋಟೆಯಲ್ಲಿ ನೆಹರೂ ಅವರು ರಾಷ್ಟ್ರಧ್ವಜ ಹಾರಿಸಬೇಕಿತ್ತು. ಆ ಹೊತ್ತಿನಲ್ಲಿ,  ‘ರಾಷ್ಟ್ರಧ್ವಜದಲ್ಲಿ 3 ಬಣ್ಣಗಳಿವೆ. ಮೂರು ಎಂಬುದು ಕೆಡುಕು, ಅದು ಮಾನಸಿಕವಾಗಿ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಯಾರೂ ಹಾರಿಸಬಾರದು’ ಎಂದು ಹೆಡಗೇವಾರ್‌ ಹೇಳಿದ್ದರು. ಇಂತಹ ಹಿನ್ನೆಲೆ ಹೆಡಗೇವಾರ್ ಅವರದ್ದಾಗಿದೆ. ಹೀಗಿದ್ದರೂ ಹೆಡಗೇವಾರ್‌ ಭಾಷಣ ವನ್ನು ಪಠ್ಯದಲ್ಲಿ ಸೇರಿಸಿದರೆ ತಪ್ಪೇನು ಎಂದು ಶಿಕ್ಷಣ ಸಚಿವರು ಪ್ರಶ್ನಿಸಿದ್ದಾರೆ. ಆರೆಸ್ಸೆಸ್ ಕಾರ್ಯಸೂಚಿಯನ್ನು ಜಾರಿಗೆ ತರುವುದಷ್ಟೇ ಬಿಜೆಪಿಯವರ ಉದ್ದೇಶ ಎಂದು ಅವರು ಟೀಕಿಸಿದರು.

ಹಿಂದೂಧರ್ಮದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಸಿಆರ್‌ಟಿಗೆ ಅನೌಪಚಾರಿಕ ಆದೇಶ ನೀಡಿದ್ದರು. ಪ್ರಕಾಶ್ ಜಾವಡೇಕರ್ ಅವರು ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಸಿಬಿಎಸ್‌ಸಿ ಶಾಲೆ ಗಳ 180 ಪಠ್ಯಪುಸ್ತಕಗಳಲ್ಲಿನ 1,334 ಪಾಠಗಳನ್ನು ಬದಲಾವಣೆ ಮಾಡಿಸಿ ದ್ದರು ಎಂದು ದೂರಿದರು.

ಸಮಿತಿ ವಿಸರ್ಜಿಸಿ: ‘ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಏಕಮುಖ ಹಾಗೂ ಆರೆಸ್ಸೆಸ್‌ ಚಿಂತನೆ ಇರುವವರ ಸಮಿತಿ ಯಾಗಿದೆ. ಸಮಿತಿ ವಿಸರ್ಜಿಸಿ, ಪಠ್ಯ ಪರಿಷ್ಕರಣೆಯ ವಿಷಯವನ್ನು ತಜ್ಞ ರಿಗೆ ವಹಿಸಬೇಕು’ ಎಂದು ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಆಗ್ರಹಿಸಿದರು. 

ಪಠ್ಯಪುಸ್ತಕ ಪ್ರತಿ ಸುಟ್ಟು ಪ್ರತಿಭಟನೆ
ಮಂಡ್ಯ: ‘ಪಠ್ಯಪುಸ್ತಕಗಳನ್ನು ಮನುಸ್ಮೃತಿ ಮಾಡಲು ಹೊರಟಿ ರುವ ಕ್ರಮವನ್ನು ಕೈಬಿಡಬೇಕು. ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿರುವ ಪಠ್ಯ ಪುಸ್ತಕ ಷರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಸಮಾನ ಮನಸ್ಕರ ವೇದಿಕೆ ಸದಸ್ಯರು ಗುರುವಾರ ನಗರದ ಜೆ.ಸಿ.ವೃತ್ತದಲ್ಲಿ ಪರಿಷ್ಕೃತ
ಪಠ್ಯಪುಸ್ತಕಗಳ ಪ್ರತಿ ಸುಟ್ಟು ಪ್ರತಿಭಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು