ಬೆಂಗಳೂರು: ವಿಧಾನಸೌಧ ಮತ್ತು ವಿಕಾಸಸೌಧದ ಜತೆಗೆ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಕನ್ನಡ ಘೋಷವಾಕ್ಯದ ಫಲಕಗಳ ಅಳವಡಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಮುಂಬರುವ ಕರ್ನಾಟಕ ರಾಜ್ಯೋತ್ಸವದ ವೇಳೆಗೆ ಆಡಳಿತದ ಶಕ್ತಿ ಕೇಂದ್ರಗಳಲ್ಲಿ ಈ ಫಲಕಗಳು ರಾರಾಜಿಸಲಿವೆ.

ಈ ಕಟ್ಟಡಗಳಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ ಆಗಬೇಕೆಂಬ ಉದ್ದೇಶದಿಂದ ಪ್ರಾಧಿಕಾರ ಈ ಯೋಜನೆ ಹಮ್ಮಿಕೊಂಡಿದೆ. ಘೋಷವಾಕ್ಯಗಳ ಆಯ್ಕೆಯ ಸಂಬಂಧ ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್ ಹಾಗೂ ಲೇಖಕಿ ಪ್ರತಿಭಾ ನಂದಕುಮಾರ್ ಅವರನ್ನು ಒಳಗೊಂಡ ಸಮಿತಿಯನ್ನು ಪ್ರಾಧಿಕಾರ ರಚಿಸಿದೆ. ಈ ಸಮಿತಿ ಘೋಷವಾಕ್ಯಗಳನ್ನು ಪರಿಶೀಲಿಸುತ್ತಿದ್ದು, ಇದೇ ತಿಂಗಳು ಸಂಗ್ರಹ ಕಾರ್ಯವನ್ನು ಪೂರ್ಣಗೊಳಿಸಲಿದೆ. ಒಟ್ಟು 2,500 ಘೋಷವಾಕ್ಯಗಳನ್ನು ಸಂಗ್ರಹಿಸುವ ಗುರಿಯನ್ನು ಪ್ರಾಧಿಕಾರ ಹಾಕಿಕೊಂಡಿದ್ದು, ಅವುಗಳಲ್ಲಿ ಅತ್ಯುತ್ತಮವಾದ, ಕನ್ನಡತನ ಪ್ರತಿಬಿಂಬಿಸುವ 500 ಘೋಷವಾಕ್ಯಗಳನ್ನು ಅಂತಿಮಗೊಳಿಸಲಾಗುತ್ತದೆ.

ಪ್ರಾಧಿಕಾರವು ಕಳೆದ ತಿಂಗಳು ಸಾರ್ವಜನಿಕರಿಂದಲೂ ಘೋಷವಾಕ್ಯಗಳನ್ನು ಆಹ್ವಾನಿಸಿತ್ತು. ಸುಮಾರು 1,600 ಘೋಷವಾಕ್ಯಗಳನ್ನು ಪ್ರಾಧಿಕಾರ ಸ್ವೀಕರಿಸಿದ್ದು, ಇವುಗಳನ್ನು ಕೂಡ ಸಮಿತಿಯ ಸದಸ್ಯರು ಪರಿಶೀಲಿಸುತ್ತಿದ್ದಾರೆ. ವಿವಿಧ ಪುಸ್ತಕಗಳು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣಗಳ ಉದ್ಧರಣಗಳು, ಕವಿವಾಣಿಗಳನ್ನೂ ಘೋಷವಾಕ್ಯಗಳಿಗೆ ಪರಿಗಣಿಸಲಾಗುತ್ತಿದೆ.

ಸ್ಥಳಾವಕಾಶ ಗುರುತು: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಸಹಯೋಗದಲ್ಲಿ ಪ್ರಾಧಿಕಾರವು ಘೋಷವಾಕ್ಯಗಳನ್ನು ಅಳವಡಿಕೆ ಮಾಡಲಿದೆ. ವಿಧಾನಸೌಧ ಹಾಗೂ ವಿಕಾಸಸೌಧ ಕಟ್ಟಡಗಳ ಭವ್ಯತೆಗೆ ಪೂರಕವಾಗಿ ಆಯ್ದ ಜಾಗಗಳಲ್ಲಿ ಕನ್ನಡದ ಘೋಷವಾಕ್ಯಗಳ ಫಲಕವನ್ನು ಅಳವಡಿಸಲಾಗುತ್ತದೆ. ಈ ಕಟ್ಟಡಗಳಿಗೆ 92 ಕಡೆ ನಾಮಫಲಕಗಳನ್ನು ಅಳವಡಿಸಲು ಸ್ಥಳಾವಕಾಶ ಗುರುತಿಸಲಾಗಿದೆ. ಅಲ್ಲಿ ಲಭ್ಯವಿರುವ ಸ್ಥಳಾವಕಾಶದ ಅನುಸಾರ ಘೋಷವಾಕ್ಯ ಹಾಗೂ ಫಲಕಗಳ ಅಳತೆಯನ್ನು ಅಂತಿಮಗೊಳಿಸಲಾಗುತ್ತದೆ.

‘ಅಂತಿಮಗೊಳಿಸಲಾದ ಫಲಕಗಳನ್ನು ಸ್ಥಳಾವಕಾಶದ ಅನುಸಾರ ಡಿಪಿಆರ್ ಅಳವಡಿಸಲಿದೆ. ಕನ್ನಡತನವನ್ನು ಬಿಂಬಿಸುವ ಕವಿ ವಾಣಿಗಳ ಜತೆಗೆ, ಜನಪದದ ಸೂಕ್ತಿಗಳು, ವಚನಕಾರರ ನುಡಿ ಮುತ್ತುಗಳನ್ನೂ ಪರಿಗಣಿಸಲಾಗುತ್ತದೆ. ಆಯ್ಕೆಯಾದ ಘೋಷವಾಕ್ಯಗಳ ಕೆಳಗೆ ಸಾಹಿತಿ, ಕವಿಗಳ ಹೆಸರನ್ನೂ ನಮೂದಿಸಲಾಗುತ್ತದೆ. ನಿರಾಶದಾಯಕ ನುಡಿಗಳನ್ನು ಪರಿಗಣಿಸುತ್ತಿಲ್ಲ’ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಆಡಳಿತದ ಶಕ್ತಿ ಕೇಂದ್ರಗಳು ಕನ್ನಡಮಯವಾಗಬೇಕು. ಆದ್ದರಿಂದ ಘೋಷವಾಕ್ಯಗಳ ಫಲಕ ಅಳವಡಿಸಲಾಗುತ್ತಿದೆ. ಇವನ್ನು ಓದಿದ ಬಳಿಕ ಕನ್ನಡಾಭಿಮಾನ ಜಾಗೃತವಾಗಬೇಕು
ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಭವ್ಯತೆಗೆ ಧಕ್ಕೆ ಆಗದಂತೆ ಫಲಕ ವಿಧಾನಸೌಧ ವಿಕಾಸಸೌಧ ಹಾಗೂ ಜಿಲ್ಲಾಧಿಕಾರಿಗಳ ಕಟ್ಟಡದ ಭವ್ಯತೆಗೆ ಧಕ್ಕೆ ಆಗದಂತೆ ಘೋಷವಾಕ್ಯಗಳ ಫಲಕವನ್ನು ಅಳವಡಿಸಲು ಪ್ರಾಧಿಕಾರ ಕ್ರಮವಹಿಸಿದೆ. ಈ ಸಂಬಂಧ ಕಲಾ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಮುಂದಾಗಿದೆ. ಕಟ್ಟಡಗಳಿಗೆ ವಾಸ್ತುಶಿಲ್ಪಕ್ಕೆ ಸರಿ ಹೊಂದುವಂತೆ ಲೋಹ ಕಲ್ಲು ಸೇರಿ ವಿವಿಧ ಪರಿಕರಗಳಿಂದ ಫಲಕ ಸಿದ್ಧಪಡಿಸಲಾಗುತ್ತದೆ. ಅಂತಿಮಗೊಳಿಸಲಾದ ಘೋಷವಾಕ್ಯಗಳ 500 ಫಲಕಗಳನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗಳ ಕಚೇರಿಗೂ ಕಳುಹಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.