ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ವಲಯ ಈಜು: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

Published 29 ಡಿಸೆಂಬರ್ 2023, 16:38 IST
Last Updated 29 ಡಿಸೆಂಬರ್ 2023, 16:38 IST
ಅಕ್ಷರ ಗಾತ್ರ

ಬೆಂಗಳೂರು: ಮೂರೂ ದಿನಗಳ ಕಾಲ ಸಂಪೂರ್ಣ ಪ್ರಾಬಲ್ಯ ಮೆರೆದ ಕರ್ನಾಟಕ ತಂಡ ನಿರೀಕ್ಷೆಯಂತೆ, ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ 1158 ಪಾಯಿಂಟ್‌ಗಳೊಂದಿಗೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಬಸವನಗುಡಿ ಈಜುಕೊಳದಲ್ಲಿ ಗುರುವಾರ ಮುಕ್ತಾಯಗೊಂಡ ಈ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯ ದಿನ ಎರಡು ಕೂಟ ದಾಖಲೆಗಳು ಮೂಡಿಬಂದವು.

ತಮಿಳುನಾಡು ತಂಡ (450 ಪಾಯಿಂಟ್ಸ್‌) ರನ್ನರ್ ಅಪ್‌ ಸ್ಥಾನ ಪಡೆಯಿತು. ಒಂದನೇ ಗುಂಪಿನ ಬಾಲಕರ ವಿಭಾಗದಲ್ಲಿ ಚಿಂತನ್ ಎಸ್‌.ಶೆಟ್ಟಿ ಮತ್ತು ಸೂರ್ಯ ಜೋಯಪ್ಪ ಒ.ಆರ್‌. (ತಲಾ 33 ಪಾಯಿಂಟ್‌), ಬಾಲಕಿಯರ ವಿಭಾಗದಲ್ಲಿ ಜನ್ಯಾ ಬಿ.ಎಸ್‌. ಮತ್ತು ನೈಶಾ ಶೆಟ್ಟಿ (ತಲಾ 33 ಪಾಯಿಂಟ್ಸ್‌) ವೈಯಕ್ತಿಕ ಚಾಂಪಿಯನ್ ಆದರು. ಎರಡನೇ ಗುಂಪಿನ ಬಾಲಕರ ವಿಭಾಗದಲ್ಲಿ ಕರ್ನಾಟಕದ ಶರಣ್ ಎಸ್‌. (35 ಪಾಯಿಂಟ್ಸ್‌) ಮತ್ತು ಬಾಲಕಿಯರ ವಿಭಾಗದಲ್ಲಿ ತೆಲಂಗಾಣದ ಶ್ರೀನಿತ್ಯಾ ಸಾಗಿ (33 ಪಾಯಿಂಟ್ಸ್) ವೈಯಕ್ತಿಕ ಪ್ರಶಸ್ತಿ ಗೆದ್ದುಕೊಂಡರು.

ಮೂರನೇ ಗುಂಪಿನ ಬಾಲಕರ ವಿಭಾಗದಲ್ಲಿ ತಮಿಳುನಾಡಿನ ಎ.ಮಿಥುನ್ (28) ಬಾಲಕರ ವಿಭಾಗದಲ್ಲಿ, ಶಿವಾನಿ ಕರ್‍ರ (33) ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಗಳಿಸಿದರು. ಮೂರು ದಿನಗಳ ಕೂಟದಲ್ಲಿ 9 ದಾಖಲೆಗಳು ಮೂಡಿಬಂದವು.

ಕೊನೆಯ ದಿನ ಎರಡು ದಾಖಲೆ: ಕರ್ನಾಟಕದ ಹಿತೈಷಿ ವಿ. ಬಾಲಕಿಯರ ಒಂದನೇ ಗುಂಪಿನ 100 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯನ್ನು 1ನಿ.20.59 ಸೆ.ಗಳಲ್ಲಿ ಪೂರೈಸಿ, ರಾಜ್ಯದವರೇ ಆದ ದಿವ್ಯಾ ಗುರುಸ್ವಾಮಿ ಹೆಸರಿನಲ್ಲಿದ್ದ ದಾಖಲೆ (2012ರಲ್ಲಿ 1:22.07) ಮುರಿದರು. ಬಾಲಕರ ಒಂದನೇ ಗುಂಪಿನ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಎನ್‌.ದೇವಗಣೇಶ್ (ಆಂಧ್ರ ಪ್ರದೇಶ) ಅವರು 2ನಿ.11.87ಸೆ.ಗಳಲ್ಲಿ ದೂರ ಕ್ರಮಿಸಿ ಕೇರಳದ ಆದಿತ್ಯನ್ ನಾಯರ್ ಹೆಸರಿನಲ್ಲಿದ್ದ 2ನಿ.12.39 ಸೆ.ಗಳ ದಾಖಲೆ ಅಳಿಸಿಹಾಕಿದರು.

ಪದಕಗಳಲ್ಲಿ ಸಿಂಹಪಾಲು ಕರ್ನಾಟಕದ ಪಾಲಾದವು. ರಾಜ್ಯದ ಈಜುಪಟುಗಳು ಒಟ್ಟು 80 ಚಿನ್ನ, 62 ಬೆಳ್ಳಿ, 30 ಕಂಚಿನ ಪದಕಗಳನ್ನು ಕೊರಳಿಗೆ ಹಾಕಿಕೊಂಡರು.

ಮೂರನೇ ದಿನ ಫಲಿತಾಂಶಗಳು (ಕರ್ನಾಟಕದ ಸ್ಪರ್ಧಿಗಳು):

ಬಾಲಕರು:

‌ಒಂದನೇ ಗುಂಪು: 100 ಮೀ. ಫ್ರೀಸ್ಟೈಲ್‌: ಅಲೈಸ್ಟರ್‌ ಸಾಮ್ಯುಯೆಲ್ ರೇಗೊ–1, ಚಿಂತನ್ ಎಸ್‌.ಶೆಟ್ಟಿ –2, ಕಾಲ: 55.18 ಸೆ.; 400 ಮೀ. ಫ್ರೀಸ್ಟೈಲ್‌: ಚಿಂತನ್‌ ಎಸ್‌.ಶೆಟ್ಟಿ –1, ಅಲೈಸ್ಟರ್ ಸಾಮ್ಯುಯೆಲ್ ರೇಗೊ –2, ಕಾಲ: 4ನಿ.16.41 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್‌: ಸೂರ್ಯ ಜೆ.ಟಿ.–1, ಸ್ವರೂಪ್ ಧನುಚೆ –2, ಕಾಲ: 29.10 ಸೆ.; 100 ಮೀ. ಬ್ರೆಸ್ಟ್‌ ಸ್ಟ್ರೋಕ್‌: ಸೂರ್ಯ ಜೋಯಪ್ಪ –1, ಶ್ರೇಯಸ್‌ ಮಂಜುನಾಥ್ –3, ಕಾಲ: 1ನಿ.09.75 ಸೆ.; 200 ಮೀ. ಬಟರ್‌ಫ್ಲೈ:ಎನ್‌.ದೇವ ಗಣೇಶ್ (ಆಂಧ್ರ ಪ್ರದೇಶ)–1, ಸ್ವರೂಪ್ ಧನುಚೆ –2, ನಿರಂಜನ್ ಕಾರ್ತಿಕ್ –3, ಕಾಲ: 2ನಿ.11.87 ಸೆ., ನೂತನ ದಾಖಲೆ, ಹಳೆಯದು: 2ನಿ.12.39ಸೆ.; 400 ಮೀ. ವೈಯಕ್ತಿಕ ಮೆಡ್ಲೆ: ರಾಘವ್ ಸ್ವಚ್ಚಂದಮ್ –1, ಸೂರ್ಯ ಜೋಯಪ್ಪ –2, ಕಾಲ: 4ನಿ.59.68 ಸೆ.

ಎರಡನೇ ಗುಂಪು: 100 ಮೀ. ಫ್ರೀಸ್ಟೈಲ್‌: ರಿಶಿತ್‌ ರಂಗನ್ –1, ಸಾತ್ವಿಕ್ ನಾಯಕ್ ಸುಜೀರ್ –3, ಕಾಲ: 58.14 ಸೆ.; 400 ಮೀ. ಫ್ರೀಸ್ಟೈಲ್‌: ಶರಣ್ ಎಸ್‌. –1 ಸಾತ್ವಿಕ್‌ ನಾಯಕ್ ಸುಜೀರ್ –2, ಕಾಲ: 4ನಿ.27.78 ಸೆ.; 100 ಮೀ. ಬ್ರೆಸ್ಟ್‌ ಸ್ಟ್ರೋಕ್‌: ದಕ್ಷ್ ಮಟ್ಟ –1, ಡೇನಿಯಲ್ ಪೌಲ್‌ ಜೆ. –2, ಕಾಲ: 1ನಿ.14.72 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್‌: ಸಮರ್ಥ ಗೌಡ ಬಿ.ಎಸ್‌. –2, ಅಭಿಮನ್ಯು ನಂಬಿಯಾರ್‌ –3, ಕಾಲ: 29.81 ಸೆ.; 200 ಮೀ. ಬಟರ್‌ಫ್ಲೈ: ಯುವಾನ್ ಆದಿತ್ಯ ಎಸ್‌. –1, ಧ್ರುಪದ್ ರಾಮಕೃಷ್ಣ –2, ಕಾಲ: 2ನಿ.22.01 ಸೆ.; 400 ಮೀ. ವೈಯಕ್ತಿಕ ಮೆಡ್ಲೆ: ಶರಣ್ ಎಸ್‌. –1, ಕಾಲ: 5ನಿ.10.32 ಸೆ.;

ಮೂರನೇ ಗುಂಪು: 100 ಮೀ. ಫ್ರೀಸ್ಟೈಲ್‌: ರೋನಿತ್‌ ಅರುಣ್ ಕುಮಾರ್ –3, ಕಾಲ: 1ನಿ.07.25 ಸೆ.; 100 ಮೀ. ಬ್ರೆಸ್ಟ್‌ ಸ್ಟ್ರೋಕ್: ರಾಮ್ ಪ್ರಕಾಶ್ –3, ಕಾಲ: 1ನಿ.28.68 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್‌: ನಿಖಿಲ್‌ ತೇಜ್ ರೆಡ್ಡಿ –1, ಕಾಲ: 35.54 ಸೆ.

ಬಾಲಕಿಯರು:

ಒಂದನೇ ಗುಂಪು: 100 ಮೀ. ಫ್ರೀಸ್ಟೈಲ್‌: ನೈಶಾ ಶೆಟ್ಟಿ –1, ಜೇಗಶ್ರೀ ಪೂಜಾ –2, ಕಾಲ: 1ನಿ.03.52 ಸೆ.; 1,500 ಮೀ. ಫ್ರೀಸ್ಟೈಲ್‌: ಜನ್ಯಾ ಬಿ.ಎಸ್‌. –1, ಆಸ್ರಾ ಸುಧೀರ್ –2, ಕಾಲ: 19ನಿ.07.86 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್‌: ಸಿದ್ಧಿ ಜೆ.ಶಾ –1, ಇಂಚರಾ ಫಣೀಂದ್ರನಾಥ್ –2, ಕಾಲ: 32.74 ಸೆ.; 100 ಮೀ. ಬ್ರೆಸ್ಟ್‌ ಸ್ಟ್ರೋಕ್: ಹಿತೈಷಿ ವಿ. –1, ಸಮನ್ವಿ ಇ.ಎಸ್‌. (ಕರ್ನಾಟಕ)–2, ಕಾಲ: 1ನಿ.20.59 ಸೆ., ನೂತನ ದಾಖಲೆ, ಹಳೆಯದು: 1ನಿ.22.07 ಸೆ.; 200 ಮೀ. ಬಟರ್‌ಫ್ಲೈ: ಜನ್ಯಾ ಬಿ.ಎಸ್‌. –1, ಕಾಲ: 2ನಿ.41.95 ಸೆ.; 400 ಮೀ. ವೈಯಕ್ತಿಕ ಮೆಡ್ಲೆ: ಆಸ್ರಾ ಸುಧೀರ್ –3, ಕಾಲ: 5ನಿ.33.32 ಸೆ.

ಎರಡನೇ ಗುಂಪು: 100 ಮೀ. ಫ್ರೀಸ್ಟೈಲ್‌: ಚರಿತಾ ಫಣೀಂದ್ರನಾಥ್ –1, ತಿಸ್ಯಾ ಸೋನಾರ್ –2, ಕಾಲ: 1ನಿ.03.75 ಸೆ.; 1,500 ಮೀ. ಫ್ರೀಸ್ಟೈಲ್‌: ತನಿಶಾ ವಿನಯ್ –1, ಶಮನಿ ಎಚ್‌.ಗೌಡ –2, ಕಾಲ: 19ನಿ.59.35 ಸೆ.; 100 ಮೀ. ಬ್ರೆಸ್ಟ್‌ ಸ್ಟ್ರೋಕ್: ಹಿಯಾ ಮನ್‌ಚಂದಾ –1, ತಿಸ್ಯಾ ಸೋನಾರ್ –3, ಕಾಲ: 1ನಿ.23.25 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್‌: ತಾನ್ಯಾ ಎಂ.ಎನ್‌.–1, ಕಾಲ: 33.44ಸೆ.; 200 ಮೀ. ಬಟರ್‌ಫ್ಲೈ: ತನಿಶಾ ವಿನಯ್ –1, ಅಂಜುಲಿ ಹೊಸ್ಕೆರೆ –2, ಕಾಲ: 2ನಿ.35.39 ಸೆ.; 400 ಮೀ. ವೈಯಕ್ತಿಕ ಮೆಡ್ಲೆ: ಹಿತಾಶ್ರೀ ಎನ್‌. –2, ಕಾಲ: 5ನಿ.54.73 ಸೆ.

ಮೂರನೇ ಗುಂಪು: 100 ಮೀ. ಫ್ರೀಸ್ಟೈಲ್‌: ಸುಮನ್ವಿ ವಿ. –3, ಕಾಲ: 1ನಿ.09.21 ಸೆ.; 100 ಮೀ. ಬ್ರೆಸ್ಟ್‌ ಸ್ಟ್ರೋಕ್: ಶ್ರೇಯಾ ಸುರೇಶ್ ಪೂಜಾರ –2, ಕಾಲ: 1ನಿ.30.61 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್‌: ಅವನಿ ಬೆಳ್ಳಿಯಪ್ಪ –3, ಕಾಲ: 36.24 ಸೆ.

ವಾಟರ್‌ಪೊಲೊ: ರಾಜ್ಯಕ್ಕೆ ರಜತ
ಬೆಂಗಳೂರು: ಕೇರಳ ತಂಡ ದಕ್ಷಿಣ ವಲಯ ಅಕ್ವೆಟಿಕ್ ಕೂಟದ ಬಾಲಕರ ವಾಟರ್‌ ಪೋಲೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿತು. ಕರ್ನಾಟಕ ಬೆಳ್ಳಿ ಮತ್ತು ತಮಿಳುನಾಡು ಕಂಚಿನ ಪದಕ ಪಡೆದವು. ಬಾಲಕಿಯರ ವಿಭಾಗದಲ್ಲೂ ಕೇರಳ ಕರ್ನಾಟಕ ಮತ್ತು ತಮಿಳುನಾಡು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT