ಸೋಮವಾರ, ನವೆಂಬರ್ 18, 2019
26 °C

ಶಿವಾಜಿನಗರ ಕ್ಷೇತ್ರ: ಕಾಂಗ್ರೆಸ್‌ ಟಿಕೆಟ್‌ಗೆ ಅಬ್ದುಲ್‌ ಅಜೀಜ್‌ ಒತ್ತಾಯ

Published:
Updated:

ಬೆಂಗಳೂರು: ‘ಕಾಂಗ್ರೆಸ್‌ ಪಕ್ಷವನ್ನು 1976ರಲ್ಲಿ ಸೇರಿದ ನಾನು, ಇಂದಿನವರೆಗೆ ಪಕ್ಷಕ್ಕಾಗಿ ದುಡಿದಿದ್ದೇನೆ. ಮುಂದಿನ ಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ ನನಗೆ ನೀಡಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಅಜೀಜ್‌ ಮನವಿ ಮಾಡಿದರು.

‘ನಮ್ಮದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ನನ್ನ ರಕ್ತದಲ್ಲಿಯೇ ಕಾಂಗ್ರೆಸ್‌ ಇದೆ. ನಾಲ್ಕು ದಶಕಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಆದರೆ, ಕ್ಷೇತ್ರದ ಪರಿಚಯವೇ ಇಲ್ಲದವರಿಗೆ ಈವರೆಗೆ ಟಿಕೆಟ್‌ ನೀಡಲಾಗಿದೆ’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಆರ್. ಗುಂಡೂರಾವ್, ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದಿಂದ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಟಿಕೆಟ್‌ ತಪ್ಪಿಸಿ, ಕ್ಷೇತ್ರದ ಪರಿಚಯವೇ ಇರದ ರೋಷನ್‌ ಬೇಗ್‌ ಅವರಿಗೆ ನೀಡಲಾಯಿತು’ ಎಂದು ಹೇಳಿದರು. 

ಪ್ರತಿಕ್ರಿಯಿಸಿ (+)