ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡ ಸಾಹಿತ್ಯ ಲೋಕ: ಎಚ್.ಎಲ್. ಪುಷ್ಪಾ ಕಳವಳ

Last Updated 12 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬದಲಾದ ಸನ್ನಿವೇಶದಲ್ಲಿ ಸಾಹಿತ್ಯ ಲೋಕವು ಹಲವು ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡಿದೆ. ಅವುಗಳನ್ನು ಮೀರಿ ಬರವಣಿಗೆಯಲ್ಲಿ ತೊಡಗಬೇಕಾದ ಸವಾಲು ನಮ್ಮ ಮುಂದಿದೆ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘ ಮತ್ತು ಕಮಲಾ ಹಂಪನಾ ಸಾಹಿತ್ಯ ವೇದಿಕೆ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ನಾಡೋಜ ಡಾ. ಕಮಲಾ ಹಂಪನಾ ದತ್ತಿ ಉಪನ್ಯಾಸ’ ಕಾರ್ಯಕ್ರಮದಲ್ಲಿಎಸ್.ಪಿ. ಪದ್ಮಪ್ರಸಾದ್ಹಾಗೂಹನುಮಾಕ್ಷಿ ಗೋಗಿ ಅವರಿಗೆ ಕಮಲಾ ಹಂಪನಾ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಾಧ್ಯಾಪಕಿ ಬಿ.ಯು. ಸುಮಾ, ‘ಸಂಶೋಧನೆ ಎನ್ನುವುದರ ಬಗ್ಗೆ ಮಾತನಾಡುವುದು ಇತ್ತೀಚಿನ ದಿನಗಳಲ್ಲಿ ಕಷ್ಟದ ಕೆಲಸವಾಗಿದೆ. ಸಂಶೋಧನಾ ಪ್ರಕಾರ ಅಷ್ಟೊಂದು ವಿಸ್ತಾರವಾಗಿದೆ. ಕಮಲಾ ಹಂಪನಾ ಅವರ ಸಂಶೋಧನಾ ಕೃತಿಗಳು ವಸ್ತು ವೈವಿಧ್ಯತೆಯಿಂದ ಕೂಡಿದ್ದು, ಭಾಷಾ ವೈವಿಧ್ಯತೆಯನ್ನು ಅವರ ಬರಹಗಳಲ್ಲಿ ಕಾಣಬಹುದು’ ಎಂದು ತಿಳಿಸಿದರು.

ಸಾಹಿತಿ ಕಮಲಾ ಹಂಪನಾ, ‘ಕನ್ನಡಿಗರು ಕನ್ನಡ ಭಾಷೆಯ ಮೂಲಕವೇ ಹೇಗೆ ಜೀವಿಸಬೇಕು ಎಂಬುದನ್ನು ನಾನು ನನ್ನ ಗುರುಗಳಿಂದ ಕಲಿತುಕೊಂಡಿದ್ದೇನೆ. ಒಂದು ಕಾವ್ಯವನ್ನು ಹೇಗೆ ಓದಬೇಕು? ಹಳಗನ್ನಡ ಹಾಗೂ ನಡುಗನ್ನಡವನ್ನು ಅರ್ಥೈಸಿಕೊಳ್ಳುವುದು ಹಾಗೂ ಬೇರೆಯವರೊಂದಿಗೆ ಸಂವಹನ ನಡೆಸುವ ಬಗ್ಗೆ ತೀ.ನಂ. ಶ್ರೀಕಂಠಯ್ಯ, ತಾ.ಸು. ಶ್ಯಾಮರಾಯ ಮತ್ತುಪರಮೇಶ್ವರ ಭಟ್ ಅವರಿಂದ ಕಲಿತುಕೊಂಡೆ’ ಎಂದು ಸ್ಮರಿಸಿಕೊಂಡರು.

ಪ್ರಶಸ್ತಿ ಪುರಸ್ಕೃತಎಸ್.ಪಿ. ಪದ್ಮಪ್ರಸಾದ್, ‘ಇತ್ತೀಚಿನ ದಿನಗಳಲ್ಲಿ ಸಂಶೋಧಕರು ಹಾಗೂ ವಿಮರ್ಶಕರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ಒಂದು ಪ್ರದೇಶದ ಸಂಸ್ಕೃತಿ, ಸಾಹಿತ್ಯ ಬೆಳೆಯದು’ ಎಂದರು.

ಹನುಮಾಕ್ಷಿ ಗೋಗಿ, ‘ರಾಜ್ಯದಾದ್ಯಂತ ಇರುವ ಎಲ್ಲ ಶಾಸನಗಳು ಹಾಗೂ ಜೈನ ಕವಿಗಳ ಬಗ್ಗೆ ಅಧ್ಯಯನ ನಡೆಸಬೇಕು. ಮಹಿಳೆಯರು ವ್ಯಾಕರಣಾತ್ಮಕ ಸಂಶೋಧನೆ ಕಡೆಗೂ ತಮ್ಮ ಗಮನ ಹರಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT