ಬೆಂಗಳೂರು: ಆನ್ಲೈನ್ ಮೂಲಕ ವೈದ್ಯರು ರೋಗಿಗಳಿಗೆ ಸಲಹೆ ನೀಡುವುದು ನಿಯಮಾವಳಿಗೆ ವಿರುದ್ಧ ಮತ್ತು ಇದಕ್ಕೆ ಮಾನ್ಯತೆ ಇಲ್ಲ ಎಂದು ಕರ್ನಾಟಕ ವೈದ್ಯಕೀಯ ಮಂಡಳಿ ಸ್ಪಷ್ಟಪಡಿಸಿದೆ.

ವೈದ್ಯ ಖುದ್ದು ಹಾಜರಿದ್ದು ರೋಗಿಯನ್ನು ಪರೀಕ್ಷಿಸಬೇಕು. ಇದರಿಂದ ನಿಖರವಾಗಿ ಸಮಸ್ಯೆಯನ್ನು ಅರಿತುಕೊಳ್ಳಲು ಸಾಧ್ಯ. ಆನ್ಲೈನ್ ಮೂಲಕ ಸಲಹೆ ನೀಡುವುದರಿಂದ ಹಲವು ಸಮಸ್ಯೆಗಳು ಉದ್ಭವವಾಗುತ್ತದೆ. ರೋಗಿಯ ಜೀವದ ಜತೆ ಆಟವಾಡಿದಂತಾಗುತ್ತದೆ ಎಂದು ಮಂಡಳಿ ಅಧ್ಯಕ್ಷ ಡಾ.ಎಚ್. ವೀರಭದ್ರಪ್ಪ ತಿಳಿಸಿದ್ದಾರೆ.

ಈಗ ತಂತ್ರಜ್ಞಾನ ಮುಂದುವರಿದಿರಬಹುದು. ಆದರೆ, ರೋಗಿಗೆ ಚಿಕಿತ್ಸೆ ನೀಡಲು ತಂತ್ರಜ್ಞಾನವೊಂದೇ ಸಾಕಾಗುವುದಿಲ್ಲ. ಆದ್ದರಿಂದ ಅದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ವೈದ್ಯಕೀಯ ನಿಯಮಾವಳಿಗೆ ಅನುಸಾರವಾಗಿಯೇ ವೈದ್ಯಕೀಯ ವೃತ್ತಿ ಮುನ್ನಡೆಯುತ್ತದೆ ಎಂದಿದ್ದಾರೆ.

ವೈದ್ಯಕೀಯ ನಿಯಮಾವಳಿ ಉಲ್ಲಂಘಿಸಿ ಆನ್ಲೈನ್ ಚಿಕಿತ್ಸಾ ಸಲಹೆಗೆ ಅವಕಾಶ ನೀಡಿದರೆ ವೈದ್ಯರು, ಆಸ್ಪತ್ರೆಗಳು ಮತ್ತು ಕಂಪನಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.