ಬೆಂಗಳೂರು: ‘ಭಾರತೀಯ ರಂಗಭೂಮಿಗೆ ಬಿ.ವಿ. ಕಾರಂತ ಅವರು ಆಧುನಿಕ ಸ್ಪರ್ಶ ನೀಡಿದರು. ಅವರಂತಹ ರಂಗ ನಿರ್ದೇಶಕರು ದೇಶದಲ್ಲಿ ಮತ್ತೊಬ್ಬರು ಬಂದಿಲ್ಲ’ ಎಂದು ಬೆನಕ ತಂಡದ ಮುಖ್ಯಸ್ಥರೂ ಆಗಿರುವ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ನಾಟಕ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಜಂಟಿಯಾಗಿ ಹಮ್ಮಿಕೊಂಡಿರುವ ‘ಭಾರತ ರಂಗ ಮಹೋತ್ಸವ’ ಅಂತರರಾಷ್ಟ್ರೀಯ ನಾಟಕೋತ್ಸವದಲ್ಲಿ ಬೆನಕ ತಂಡಕ್ಕೆ ಸುವರ್ಣ ಮಹೋತ್ಸವ ಗೌರವವನ್ನು ನಗರದಲ್ಲಿ ಮಂಗಳವಾರ ಸಮರ್ಪಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ನಾಗಾಭರಣ, ‘ಕನ್ನಡ ರಂಗಭೂಮಿಗೆ ಬಿ.ವಿ. ಕಾರಂತ ಅವರು ನೀಡಿದ ಕೊಡುಗೆ ಅನನ್ಯ. ರಂಗ ಸಂಗೀತಕ್ಕೆ ಅವರು ಹೊಸ ಆಯಾಮ ನೀಡಿದರು. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಿದರು. ರಂಗಭೂಮಿಗೆ ನೀಡಿದ ಕೊಡುಗೆಗಳ ಮೂಲಕವೇ ಅವರು ಚಿರಸ್ಥಾಯಿಯಾಗಿದ್ದಾರೆ. ಬೆಂಗಳೂರು, ನವದೆಹಲಿ ಸೇರಿ ದೇಶದ ವಿವಿಧೆಡೆ ಅವರ ನಾಟಕಗಳು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ‘ರಂಗಭೂಮಿಯ ಬೆಳವಣಿಗೆಗೆ ಬೆನಕ ತಂಡ ದೊಡ್ಡ ಕೊಡುಗೆ ನೀಡಿದೆ. ಬಿ.ವಿ. ಕಾರಂತ ಅವರ ಕನಸುಗಳಿಂದ ನಿರ್ಮಾಣವಾದ ಈ ತಂಡ, ಅವರ ಎಲ್ಲ ನಾಟಕಗಳನ್ನು ಪ್ರಯೋಗ ಮಾಡಿದೆ. ಅವರನ್ನು 50 ವರ್ಷಗಳಿಂದ ಜೀವಂತವಾಗಿರಿಸಿದೆ’ ಎಂದರು.

ಬಳಿಕ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪ್ರಸ್ತುತ ಪಡಿಸಿದ ‘ತಾಜಮಹಲ್ ಕ ಟೆಂಡರ್’ ಹಿಂದಿ ನಾಟಕ ಪ್ರದರ್ಶನವಾಯಿತು. ಇದನ್ನು ಚಿತ್ತರಂಜನ್ ತ್ರಿಪಾಟಿ ನಿರ್ದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.