ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂ. ಮಳಗಿ ಜಯತೀರ್ಥಾಚಾರ್ಯರಿಗೆ ಗೌರವ ಡಿ.ಲಿಟ್‌, ಕಣ್ಣನ್‌ಗೆ ಡಿ.ಲಿಟ್ 

ಸಂಸ್ಕೃತ ವಿವಿ 8ನೇ ಘಟಿಕೋತ್ಸವ: 30 ಮಂದಿಗೆ ಪಿಎಚ್‌.ಡಿ., 43 ಪದವೀಧರರಿಗೆ ಎಂ.ಫಿಲ್‌ ಪ್ರದಾನ
Last Updated 10 ಏಪ್ರಿಲ್ 2021, 10:39 IST
ಅಕ್ಷರ ಗಾತ್ರ

ಬೆಂಗಳೂರು: ಸಂಸ್ಕೃತ ವಿಶ್ವವಿದ್ಯಾಲಯದ ‘ಗೌರವ ಡಿ.ಲಿಟ್‌’ ಪದವಿಯನ್ನು ಹಿರಿಯ ಸಂಸ್ಕೃತ ವಿದ್ವಾಂಸ ಪಂ. ಮಳಗಿ ಜಯತೀರ್ಥಾಚಾರ್ಯ ಅವರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಪ್ರದಾನ ಮಾಡಿದರು.

ಗಾಯನ ಸಮಾಜದಲ್ಲಿ ಶನಿವಾರ ನಡೆದ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು, ಇನ್ನೊಬ್ಬ ಸಂಸ್ಕೃತ ಪಂಡಿತ ಎಸ್. ಕಣ್ಣನ್ ಅವರಿಗೆ ಡಿ. ಲಿಟ್, 30 ಮಂದಿಗೆ ಪಿಎಚ್. ಡಿ ಪದವಿ, 43 ಮಂದಿಗೆ ಎಂ.ಫಿಲ್‌ ಪದವಿ ಪ್ರದಾನ ಮಾಡಿದರು.

ಪಂ. ಮಳಗಿ ಜಯತೀರ್ಥಾಚಾರ್ಯ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ. ಮಾತುಂಗಾದ ಮಾವುಲಿ ವಿದ್ಯಾಪೀಠದಲ್ಲಿ ಅವರು ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದರು.

ಪಶ್ಚಿಮ ಬಂಗಾಳ ಬೇಲೂರಿನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸ್ವಾಮಿ ಆತ್ಮಪ್ರಿಯಾನಂದ ಅವರು ಕೊಲ್ಕತಾದಿಂದಲೇ ವರ್ಚುವಲ್‌ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು..

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕಾ.ಇ. ದೇವನಾಥನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಎಂ.ಕೊಟ್ರೇಶ್‌, ಹಿರಿಯ ಉನ್ನತ ಅಧಿಕಾರಿಗಳು, ಪ್ರೊಫೆಸರ್‌ಗಳು, ಸಿಬ್ಬಂದಿ, ವಿಶೇಷ ಆಹ್ವಾನಿತರು ಘಟಿಕೋತ್ಸವಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT