ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ವಿವಿಧ ಖಾಸಗಿ ಕ್ಯಾಬ್ ಕಂಪನಿಗಳು ಹೊಂದಿರುವ ಒಪ್ಪಂದದ ಕರಾರು ನವೀಕರಣಗೊಳ್ಳಲಿದೆ. ಹಾಗಾಗಿ ಟ್ಯಾಕ್ಸಿ ಸೇವೆ ಶುಲ್ಕ ಹೆಚ್ಚಾಳ ಆಗುವ ಸಾಧ್ಯತೆ ಇದೆ.
ಒಪ್ಪಂದಲ್ಲಿ ಪಿಕ್‌ಆಪ್ ಶುಲ್ಕ ಸೇರಿದಂತೆ ಇತರ ಶುಲ್ಕ ಹೆಚ್ಚಳವಾಗುತ್ತಿರುವುದರಿಂದ ನಗರದ ವಿವಿಧೆಡೆಗಳಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ಮಾಡುವ ಓಲಾ, ಉಬಲ್, ಕೆಎಸ್‌ಟಿಡಿಸಿ ಸೇರಿದಂತೆ ಇತರ ಕ್ಯಾಬ್‌ಗಳ ಸೇವೆಯೂ ದುಬಾರಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣಕ್ಕೆ ಬರುವ ಗ್ರಾಹಕರು ಪ್ರಯಾಣ ಶುಲ್ಕದೊಂದಿಗೆ ಟ್ಯಾಕ್ಸ್, ಕಮಿಷನ್, ವಿಮಾನ ನಿಲ್ದಾಣ ವಿಧಿಸುವ ಶುಲ್ಕ ಸೇರಿ ಬಿಲ್ ಪಾವತಿಸಬೇಕಾಗಿದೆ. ಈಗಾಗಲೇ ಉಬರ್ ಕ್ಯಾಬ್ ಕಂಪನಿಯು ಗ್ರಾಹಕರಿಗೆ ಈ ಮಾಹಿತಿ ಒದಗಿಸುತ್ತಿದೆ.
ಕೆಎಸ್‌ಟಿಡಿಸಿ, ಓಲಾ, ರಿಪೆಕ್ಸ್ ಮೊಬಲಿಟಿ, ಡಬ್ಲ್ಯೂಟಿಐ, ಸಿಒಆರ್ ಸೇರಿದಂತೆ ಇತರ ಕಂಪನಿಗಳು ವಿಮಾನ ನಿಲ್ದಾಣದೊಂದಿಗೆ ಹೊಂದಿರುವ ಒಪ್ಪಂದವೂ ಸೆಪ್ಟೆಂಬರ್ 31ರೊಳಗೆ ನವೀಕರಣ ಆಗಲಿದೆ. ನಂತರ ಕಂಪನಿಗಳ ಟ್ಯಾಕ್ಸಿ ಸೇವೆಯೂ ದುಬಾರಿ ಆಗಲಿದೆ ಎನ್ನುವ ಮಾಹಿತಿ ಇದೆ.