ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನದಲ್ಲಿ ದೇವಿ ವಿಗ್ರಹ ಪ್ರತಿಷ್ಠಾಪನೆ: ತೆರವು

Last Updated 3 ಜುಲೈ 2021, 21:26 IST
ಅಕ್ಷರ ಗಾತ್ರ

ಕೆಂಗೇರಿ: ಸ್ಮಶಾನದಲ್ಲಿ ಅಕ್ರಮವಾಗಿ ಪ್ರತಿಷ್ಠಾಪಿಸಲಾಗಿದ್ದ ದೇವರ ವಿಗ್ರಹವನ್ನು ಪೊಲೀಸರ ನೆರವಿನೊಂದಿಗೆ ಆವಲಹಳ್ಳಿ ಗ್ರಾಮಸ್ಥರು ತೆರವುಗೊಳಿಸಿದರು.

‘ಉತ್ತರಹಳ್ಳಿ ಹೋಬಳಿ ವ್ಯಾಪ್ತಿಯ ಆವಲಹಳ್ಳಿ ಸ್ಮಶಾನದಲ್ಲಿ ಕೆಲವು ದಿನಗಳ ಹಿಂದೆ ಕಸ್ತೂರಬಾ ಕಾಲೊನಿ ನಿವಾಸಿಯಾದ ಮಹದೇವಮ್ಮ ಎಂಬುವರು ಕಾಳಿ ದೇವಾಲಯವನ್ನು ನಿರ್ಮಿಸಲೆಂದು ರಾತ್ರೋರಾತ್ರಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದರು. ಮೇಲ್ಚಾವಣಿ ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದರು. ದೇವಿ ತಮ್ಮ ಮೇಲೆ ಆವಾಹನೆಯಾಗಿದ್ದಾಳೆ ಎಂದು ಮುಗ್ಧ ಜನರನ್ನು ನಂಬಿಸುವ ಪ್ರಯತ್ನ ನಡೆಸಿದ್ದರು. ಸ್ಮಶಾನ ಭೂಮಿಯಲ್ಲಿ ದೇವಾಲಯ ನಿರ್ಮಾಣ ಮಾಡುವುದು ಸರಿಯಲ್ಲ ಎಂದು ನಾವು ಪೊಲೀಸರಿಗೆ ದೂರು ನೀಡಿದ್ದೆವು’ ಎಂದು ಸ್ಥಳೀಯರಾದ ಆರ್. ನಂಜುಂಡಪ್ಪ ಹೇಳಿದರು.

‘ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೂ, ಮಹಾದೇವಮ್ಮ ಅವರು ದೇಗುಲ ನಿರ್ಮಾಣ ಯತ್ನ ಕೈಬಿಟ್ಟಿರಲಿಲ್ಲ. ಸ್ಥಳೀಯರು ಸೇರಿ, ವಿಗ್ರಹವನ್ನು ಹೊರತೆಗೆದು ಮಹಾದೇವಮ್ಮ ಅವರ ಮನೆ ಅಂಗಳಕ್ಕೆ ಸ್ಥಳಾಂತರಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT